×
Ad

ಬಾಯಿ ಆರೋಗ್ಯವು ದೇಹಾರೋಗ್ಯದ ದಿಕ್ಸೂಚಿ:ಡಾ. ಚೂಂತಾರು

Update: 2018-11-22 22:12 IST

ಮಂಗಳೂರು, ನ. 22: ಚೂಂತಾರು ಸರೋಜಿನಿ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ನಗರದ ಬಿಜೈ ಕಾಪಿಕಾಡಿನಲ್ಲಿರುವ ದ.ಕ. ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಂತ ಆರೋಗ್ಯ ಮಾಹಿತಿ ಶಿಬಿರ ಗುರುವಾರ ನಡೆಯಿತು.

ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಮುರಲಿ ಮೋಹನ್ ಚೂಂತಾರು ಮಕ್ಕಳಿಗೆ ಹಾಲು ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ?ಎಂಬುದರ ಬಗ್ಗೆ ಮಾಹಿತಿ ನೀಡಿದರಲ್ಲದೆ ಹಲ್ಲುಜ್ಜುವ ಕ್ರಮ, ಯಾವ ಟೂತ್‌ಪೇಸ್ಟ್ ಮತ್ತು ಟೂತ್‌ಬ್ರಶ್ ಬಳಸಬೇಕು ಎಂಬುದರ ಬಗ್ಗೆ ಸಲಹೆ ನೀಡಿದರು.

ಬಾಯಿ ಆರೋಗ್ಯ ಚೆನ್ನಾಗಿದ್ದಲ್ಲಿ ದೇಹದ ಆರೋಗ್ಯಕ್ಕೆ ಉತ್ತಮ ಬಾಯಿ ಆರೋಗ್ಯ ದೇಹಾರೋಗ್ಯದ ದಿಕ್ಸೂಚಿ ಎಂದು ಡಾ.ಮುರಲಿ ಮೋಹನ್ ಚೂಂತಾರು ಮಕ್ಕಳಿಗೆ ಕಿವಿಮಾತು ಹೇಳಿದರು.

ಈ ಸಂದರ್ಭ 1,2,3 ಮತ್ತು 7ನೇ ತರಗತಿಯ ಸುಮಾರು 50 ಮಕ್ಕಳಿಗೆ ಉಚಿತವಾಗಿ ಟೂತ್‌ಪೇಸ್ಟ್ ಮತ್ತು ಮೌತ್‌ವಾಶ್‌ಗಳನ್ನು ನೀಡಲಾಯಿತು. ಶಾಲೆಯ ಮುಖ್ಯಶಿಕ್ಷಕಿ ಪಾವನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಷಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News