ಫರಂಗಿಪೇಟೆ: ನ.23ರಂದು ಎಂಪವರ್ ಇಂಡಿಯಾ ಪೌಂಡೇಶನ್ ಮಾಹಿತಿ ಕೇಂದ್ರ ಉದ್ಘಾಟನೆ

Update: 2018-11-22 16:50 GMT

ಫರಂಗಿಪೇಟೆ, ನ. 22 : ಎಂಪವರ್ ಇಂಡಿಯಾ ಫೌಂಡೇಶನ್ ಇದರ ಕರ್ನಾಟಕದ ಪ್ರಪಥಮ ಉಚಿತ ಮಾಹಿತಿ ಮತ್ತು ಸೇವಾ ಕೇಂದ್ರವೂ ನ.23 ರಂದು ಸಂಜೆ 4:30ಕ್ಕೆ ಫರಂಗಿಪೇಟೆಯ ವಿಶ್ವಾಸ್ ಸಿಟಿ ಕಟ್ಟಡದಲ್ಲಿ ಉದ್ಘಾಟನೆಗೊಳ್ಳಲಿದೆ.

ಎಂಪವರ್ ಇಂಡಿಯಾ ಕರ್ನಾಟಕ ಸಂಚಾಲಕರಾದ ಅಯ್ಯೂಬ್ ಅಗ್ನಾಡಿ ಉದ್ಘಾಟನೆ ಮಾಡಲಿದ್ದಾರೆ. ಅದ್ಯಕ್ಷತೆಯನ್ನು ಫರಂಗಿಪೇಟೆ ಮಾಹಿತಿ ಕೇಂದ್ರದ ಅಧ್ಯಕ್ಷ ಬಶೀರ್ ಫರಂಗಿಪೇಟೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕ್ರಿಯೇಟಿವ್ ಫೌಂಡೇಶನ್ ಮಂಗಳೂರು ನಿರ್ದೇಶಕ ಮುಹಮ್ಮದ್ ವಳವೂರು, ಎಸ್.ಡಿ.ಪಿ.ಐ ರಾಜ್ಯ ಫ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಫರಂಗಿಪೇಟೆ ಮಸೀದಿ ಅಧ್ಯಕ್ಷ ಎಫ್ ಮುಹಮ್ಮದ್ ಬಾವ, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪ್ಪಳ್ಳ, ಅಮೆಮಾರ್ ಮಸೀದಿ ಅಧ್ಯಕ್ಷ ಉಮರಬ್ಬ ಎ.ಎಸ್.ಬಿ, ಪಿ.ಎಫ್.ಐ ಬಂಟ್ವಾಳ ಅಧ್ಯಕ್ಷ ಇಜಾಝ್ ಅಹ್ಮದ್, ಅಮೆಮಾರ್ ಮಸೀದಿ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್, ಅರಫಾ ಜುಮ್ಮಾ ಮಸೀದಿ ಕುಂಪನಮಜಲ್ ಅಧ್ಯಕ್ಷ ಬುಖಾರಿ ಕುಂಪನಮಜಲ್, ಸುಲ್ತಾನ್ ಬಿಲ್ಡರ್ಸ್ ಮಾಲಕರಾದ ಮುಹಮ್ಮದ್ ಯುಬಿ, ಪಿ.ಎಪ್.ಐ ಫರಂಗಿಪೇಟೆ ವಲಯಾಧ್ಯಕ್ಷ ನಿಸಾರ್ ವಳವೂರು, ಪುದು ಗ್ರಾಪಂ ಸದಸ್ಯ ನಝೀರ್ ಹತ್ತನೇಮೈಲ್ ಕಲ್ಲು, ಎಸ್ ಡಿ.ಪಿ.ಐ ಮಂಗಳೂರು ಕ್ಷೇತ್ರ ಸಮಿತಿ ಉಪಾಧ್ಯಕ್ಷ ಸುಲೈಮಾನ್ ಉಸ್ತಾದ್, ಗ್ರಾಮ ಸಮಿತಿ ಅಧ್ಯಕ್ಷ ಇಕ್ಬಾಲ್ ಅಮೆಮಾರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ಕೇಂದ್ರದ ಅಧ್ಯಕ್ಷ ಬಶೀರ್ ಫರಂಗಿಪೇಟೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News