ಟಿವಿ ರಿಮೋಟ್ ಗಾಗಿ ಜಗಳ: ಅಣ್ಣನನ್ನು ಕೊಂದ ಬಾಲಕ

Update: 2018-11-23 17:12 GMT

ಅಂಕಾರ, ನ. 23: ಟಿವಿ ರಿಮೋಟ್ ಕುರಿತ ಜಗಳ ತಾರಕಕ್ಕೇರಿ 16 ವರ್ಷದ ಬಾಲಕನೊಬ್ಬ ತನ್ನ 18 ವರ್ಷದ ಸಹೋದರನನ್ನು ಚೂರಿಯಿಂದ ಇರಿದು ಕೊಂದ ಘಟನೆ ಟರ್ಕಿಯ ಅನಾತೊಲಿಯ ರಾಜ್ಯದ ಕಿರಿಕ್ಕಲೆ ನಗರದಿಂದ ವರದಿಯಾಗಿದೆ.

ನವೆಂಬರ್ 20ರಂದು ಸಹೋದರರು ತಮ್ಮ ಮನೆಯಲ್ಲಿ ಟಿವಿ ನೋಡುತ್ತಿದ್ದಾಗ ಯಾವ ಚಾನೆಲ್ ನೋಡಬೇಕು ಎಂಬ ವಿಷಯದಲ್ಲಿ ಜಗಳ ಮಾಡಿಕೊಂಡರು. ಕೋಪಗೊಂಡ ತಮ್ಮ ಅಡುಗೆ ಮನೆಗೆ ಹೋಗಿ ಚಾಕುವೊಂದನ್ನು ತಂದು ಅಣ್ಣನಿಗೆ ಇರಿದನು.

ಅಣ್ಣ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ತಮ್ಮನನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News