×
Ad

ಜನಾಗ್ರಹ ಸಭೆ: ವಾಹನ ನಿಲುಗಡೆಗೆ ಅವಕಾಶ

Update: 2018-11-24 21:15 IST

ಮಂಗಳೂರು, ನ.24: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನ. 25ರಂದು ಅಪರಾಹ್ನ 2:30ರಿಂದ ಜ್ಯೋತಿ ವೃತ್ತದಿಂದ ನೆಹರೂ ಮೈದಾನಕ್ಕೆ ನಡೆಯುವ ಶೋಭಾಯಾತ್ರೆ ಮತ್ತು ಜನಾಗ್ರಹ ಸಭೆಯಲ್ಲಿ ಪಾಲ್ಗೊಳ್ಳುವವರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

*ಮೂಡುಬಿದ್ರೆ, ಎಡಪದವು, ಕೈಕಂಬ, ಗುರುಪುರ, ವಾಮಂಜೂರು ಕಡೆಯಿಂದ ಬರುವ ವಾಹನಗಳು ನಂತೂರ್ ಮಲ್ಲಿಕಟ್ಟೆ ಮಾರ್ಗವಾಗಿ ಬಂಟ್ಸಹಾಸ್ಟೆಲ್ನಲ್ಲಿ ಜನರನ್ನು ಇಳಿಸಿ, ಬಂಟ್ಸಹಾಸ್ಟೆಲ್ ಮೈದಾನದಲ್ಲಿ ನಿಲುಗಡೆ ಮಾಡಬಹುದು.

*ಮುಲ್ಕಿ, ಸುರತ್ಕಲ್ ಕಡೆಯಿಂದ ಬರುವ ವಾಹನಗಳು ಕೂಳೂರು, ಕೊಟ್ಟಾರ, ಲೇಡಿಹಿಲ್, ಲಾಲ್ಭಾಗ್, ಪಿವಿಎಸ್ ಮಾರ್ಗವಾಗಿ ಬಂಟ್ಸ್ ಹಾಸ್ಟೆಲ್ನಲ್ಲಿ ಜನರನ್ನು ಇಳಿಸಿ, ಬಂಟ್ಸಹಾಸ್ಟೆಲ್ ಮೈದಾನದಲ್ಲಿ ನಿಲುಗಡೆ ಮಾಡಬಹುದು.

*ಬಜ್ಪೆ, ಕಟೀಲು, ಕಿನ್ನಿಗೋಳಿ ಕಡೆಯಿಂದ ಬರುವ ವಾಹನಗಳು ಕಾವೂರು-ಯೆಯ್ಯಿಡಿ ಮಾರ್ಗವಾಗಿ ನಂತೂರ್ ಮಲ್ಲಿಕಟ್ಟೆ ಮೂಲಕ ಬಂದು ಬಂಟ್ಸಹಾಸ್ಟೆಲ್ನಲ್ಲಿ ಜನರನ್ನು ಇಳಿಸಿ ಕದ್ರಿ ಮೈದಾನದಲ್ಲಿ ನಿಲುಗಡೆ ಮಾಡಬಹುದು.

*ಸುಳ್ಯ, ಪುತ್ತೂರು, ವಿಟ್ಲ, ಬೆಳ್ತಂಗಡಿ, ಬಂಟ್ವಾಳ ಕಡೆಯಿಂದ ಬರುವ ವಾಹನಗಳು ಬಿಸಿ ರೋಡ್ ಮೂಲಕ ಬಂದು ಪಡೀಲ್ ಪಂಪುವೆಲ್, ಕಂಕನಾಡಿ ಮಾರ್ಗವಾಗಿ ಬಲ್ಮಠ ವೃತ್ತದಲ್ಲಿ ಜನರನ್ನು ಇಳಿಸಿ ಶಾಂತಿ ನಿಲಯ ರಸ್ತೆಯ ಮೂಲಕ ಸಾಗಿ ಎಮ್ಮೆಕೆರೆ ಮೈದಾನದಲ್ಲಿ ನಿಲುಗಡೆ ಮಾಡಬಹುದು.

*ತೊಕ್ಕೊಟ್ಟು ಕಡೆಯಿಂದ ಬರುವ ವಾಹನಗಳು ಪಂಪುವೆಲ್, ಕಂಕನಾಡಿ ಮಾರ್ಗವಾಗಿ ಬಲ್ಮಠ ವೃತ್ತದಲ್ಲಿ ಜನರನ್ನು ಇಳಿಸಿ ಶಾಂತಿ ನಿಲಯ ರಸ್ತೆಯ ಮೂಲಕ ಸಾಗಿ ಮಂಗಳಾದೇವಿ ಪಾಂಡೇಶ್ವರ ರಸ್ತೆಯ ಅಕ್ಕ ಪಕ್ಕದಲ್ಲಿ ನಿಲುಗಡೆ ಮಾಡಬಹುದು.

*ಮಂಗಳೂರು ನಗರದಿಂದ ಬರುವ ಬಸ್ಸುಗಳು ಮತ್ತು ಚತುರ್ಚಕ್ರ ವಾಹನಗಳನ್ನು ಸಂತ ಆ್ಯನ್ಸ್ ಮತ್ತು ರೋಝಾಯೋ ಶಾಲೆಯ ರಸ್ತೆಯ ಅಕ್ಕ ಪಕ್ಕದಲ್ಲಿ ನಿಲುಗಡೆ ಮಾಡಬಹುದು, ಹಾಗು ದ್ವಿಚಕ್ರ ವಾಹನಗಳನ್ನು ಕೇಂದ್ರ ಮೈದಾನದ ಒಳಗಡೆ ಕ್ರಿಕೆಟ್ ಗ್ರೌಂಡಿನ ಎರಡು ಬದಿಯಲ್ಲಿ ನಿಲುಗಡೆ ಮಾಡಬಹುದು ಎಂದು ವಿಹಿಂಪ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News