×
Ad

ಕರ್ನಾಟಕದ ಮೀನಿಗೆ ನಿಷೇಧ: ಗೋವಾಕ್ಕೆ ಸಂಸದ ನಳಿನ್‌ಕುಮಾರ್ ನೇತೃತ್ವದ ನಿಯೋಗ

Update: 2018-11-24 22:01 IST

ಉಡುಪಿ, ನ.24: ಕರ್ನಾಟಕದಿಂದ ಗೋವಾಕ್ಕೆ ರಫ್ತಾಗುತಿದ್ದ ಮೀನಿಗೆ ಗೋವಾದಲ್ಲಿ ನಿಷೇಧ ಹೇರಿರುವುದರ ಕುರಿತು ಅಲ್ಲಿನ ಸಚಿವರು ಸೇರಿದಂತೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಮಂಗಳೂರಿನ ಸಂಸದ ನಳಿನ್‌ಕುಮಾರ್ ಕಟೀಲ್ ನೇತೃತ್ವದ ಕರಾವಳಿಯ ಮೂರು ಜಿಲ್ಲೆಗಳ ಶಾಸಕರು ಹಾಗೂ ಮೀನುಗಾರರ ನಿಯೋಗ ನ.27ರಂದು ಗೋವಾಕ್ಕೆ ತೆರಳಲಿದೆ.

ನಿಯೋಗ ಪಣಜಿಯಲ್ಲಿ ಗೋವಾದ ಸ್ಪೀಕರ್, ಮೀನುಗಾರಿಕೆ ಹಾಗೂ ಆರೋಗ್ಯ ಸಚಿವರನ್ನು ಭೇಟಿಯಾಗಿ ಕರಾವಳಿ ಮೀನುಗಾರರ ಸಮಸ್ಯೆಯ ಕುರಿತು ಸಭೆ ನಡೆಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಲಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಡಗೌಡರ ಭೇಟಿ: ಈ ನಡುವೆ ಕೆ.ರಘುಪತಿ ಭಟ್ ನೇತೃತ್ವದ ಜಿಲ್ಲೆಯ ಮೀನುಗಾರರ ನಿಯೋಗವೊಂದು ಶುಕ್ರವಾರ ಬೆಂಗಳೂರಿನಲ್ಲಿ ರಾಜ್ಯ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡೇಗೌಡರನ್ನು ಭೇಟಿಯಾಗಿ ಕರಾವಳಿ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿತು.

ಕರ್ನಾಟಕದ ಮೀನುಗಳಿಗೆ ಗೋವಾದಲ್ಲಿ ನಿಷೇಧ ಹೇರಲಾಗಿದ್ದು ಶೀಘ್ರವೇ ಅಲ್ಲಿನ ಸರಕಾರದೊಂದಿಗೆ ಮಾತುಕತೆ ನಡೆಸಿ ಈ ನಿಷೇಧವನ್ನು ತೆರವು ಗೊಳಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಯಿತು.

ಕರ್ನಾಟಕದ ಮೀನುಗಳಿಗೆ ಗೋವಾದಲ್ಲಿ ನಿಷೇಹೇರಲಾಗಿದ್ದುಶೀಘ್ರವೇಅಲ್ಲಿನಸರಕಾರದೊಂದಿಗೆಮಾತುಕತೆನಡೆಸಿಈನಿಷೇವನ್ನು ತೆರವು ಗೊಳಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಯಿತು. ಮಲ್ಪೆಯ ಸ್ಲೀಪ್ ವೇಯನ್ನು ನಿರ್ವಹಣೆಗೆ ಮಲ್ಪೆ ಮೀನುಗಾರರ ಸಂಘಕ್ಕೆ ನೀಡಬೇಕೆಂದು ನಿಯೋಗ ಮನವಿ ಮಾಡಿತು. ಮನವಿಗೆ ಸಕಾರಾತ್ಮಕವಾಗಿ ಸ್ಪಂಧಿಸಿದ ಸಚಿವರು ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಮಾತನಾಡಿ ನಂತರ ಗೋವಾಗೆ ತೆರಳಿ ಅಲ್ಲಿನ ಸರಕಾರದೊಂದಿಗೆ ಮಾತುಕತೆ ನಡೆಸುವ ಬಗ್ಗೆ ಭರವಸೆ ನೀಡಿದ್ದಾರೆ.

ನಿಯೋಗದಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಅಖಿಲ ಭಾರತ ಮೀನುಗಾರರ ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ ಕೆ ಸುವರ್ಣ, ಆಳ ಸಮುದ್ರ ಮೀನುಗಾರರ ಸಂಘದ ಅಧ್ಯಕ್ಷ ಕಿಶೋರ್ ಡಿ. ಸುವರ್ಣ, ಮಲ್ಪೆಮೀನುಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲ ಆರ್.ಕೆ., ಮೀನು ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ರತ್ನಾಕರ್ ಸಾಲಿಯಾನ್, ಸದಸ್ಯರಾದ ಕರುಣಾಕರ ಸಾಲ್ಯಾನ್,ಸಂತೋಷ್ ಸಾಲ್ಯಾನ್, ಮೊಗವೀರ ಯುವ ಸಂಘಟನೆಯ ಜಿಲ್ಲಾ ಅಧ್ಯಕ್ಷ ವಿನಯ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News