×
Ad

ಸಿಂಡ್ ಬ್ಯಾಂಕಿನ ಪ್ರಧಾನ ಕಚೇರಿ ಸ್ಥಳಾಂತರ ಕೈಬಿಡಿ: ಭಟ್

Update: 2018-11-24 22:09 IST

ಉಡುಪಿ, ನ.24:ಉಡುಪಿ-ಮಣಿಪಾಲದೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುವ, ಇಲ್ಲೇ ಹುಟ್ಟಿ ಬೆಳೆದಿರುವ ಸಿಂಡಿಕೇಟ್ ಬ್ಯಾಂಕ್‌ನ ಪ್ರಧಾನ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಪ್ರಯತ್ನವನ್ನು ಕೈಬಿಡಬೇಕು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.

ಉಡುಪಿಯ ಹೊಟೇಲ್ ದುರ್ಗಾ ಇಂಟರ್‌ನೇಶನಲ್‌ನಲ್ಲಿ ಇಂದು ಸಂಜೆ ಪ್ರಾರಂಭಗೊಂಡ ಸಿಂಡಿಕೇಟ್ ಬ್ಯಾಂಕ್ ಆಫೀಸರ್ಸ್‌ ಸಂಘಟನೆಯ ಎರಡು ದಿನಗಳ 15ನೇ ದ್ವೈವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಈಗ ಮಣಿಪಾಲದಲ್ಲಿರುವ ಸಿಂಡಿಕೇಟ್ ಬ್ಯಾಂಕ್‌ನ ಪ್ರಧಾನ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುತ್ತಿರುವ ಬಗ್ಗೆ ಮಾಹಿತಿಗಳು ಬಂದಿವೆ. ಈ ನಿರ್ಧಾರವನ್ನು ಕೈಬಿಡಬೇಕೆಂದು ಒತ್ತಾಯಿಸಿ ಬ್ಯಾಂಕಿನ ಅಧ್ಯಕ್ಷರಿಗೆ ತಾನು ಪತ್ರ ಬರೆಯಲಿದ್ದು, ಇದಕ್ಕೆ ಸ್ಪಂಧಿಸದಿದ್ದರೆ ಪ್ರತಿಭಟನೆಗೂ ಮುಂದಾಗಬೇಕಾಗ ಬಹುದು ಎಂದವರು ಎಚ್ಚರಿಸಿದರು.

ಈಗ ಮಣಿಪಾಲದಲ್ಲಿರುವ ಸಿಂಡಿಕೇಟ್ ಬ್ಯಾಂಕ್‌ನ ಪ್ರಾನಕಚೇರಿಯನ್ನುಬೆಂಗಳೂರಿಗೆಸ್ಥಳಾಂತರಿಸುತ್ತಿರುವಬಗ್ಗೆಮಾಹಿತಿಗಳುಬಂದಿವೆ.ಈರ್ನಿಾರವನ್ನು ಕೈಬಿಡಬೇಕೆಂದು ಒತ್ತಾಯಿಸಿ ಬ್ಯಾಂಕಿನ ಅ್ಯಕ್ಷರಿಗೆತಾನುಪತ್ರಬರೆಯಲಿದ್ದು,ಇದಕ್ಕೆಸ್ಪಂಧಿಸದಿದ್ದರೆಪ್ರತಿಟನೆಗೂ ಮುಂದಾಗಬೇಕಾಗ ಬಹುದು ಎಂದವರು ಎಚ್ಚರಿಸಿದರು. ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಸೋಮಶೇಖರ್ ಭಟ್, ಸಂಘಟನೆ ಪ್ರಧಾನ ಕಾರ್ಯದರ್ಶಿ ಅರುಣ್ ಎಂ.ಐ. ಹಾಗೂ ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ಪ್ರಭಾಕರ ಭಟ್ ಉಸ್ಥಿತರಿದ್ದರು. ಸಂಘಟನೆಯ ಮಾಜಿ ಅಧ್ಯಕ್ಷ ಮಂಜುನಾಥ ಎಸ್.ಭಾಗ್ವತ್ ಮಾತನಾಡಿದರು.

ಬ್ಯಾಂಕ್ ಆಫೀಸರ್ಸ್‌ಗಳ ರಾಷ್ಟ್ರೀಯ ಸಂಘಟನೆ (ಎನ್‌ಒಬಿಒ)ಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ವಿ.ವಿ.ಟಿಕ್ಕೇಕರ್ ಅವರು ನಾಳೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಿಂಡಿಕೇಟ್ ಬ್ಯಾಂಕ್ ಆಫೀಸರ್ಸ್‌ ಸಂಘಟನೆಯ ಅಧ್ಯಕ್ಷ ಕೆ.ಪಿ.ವಿಶ್ವನಾಥನ್ ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಆದರ್ಶ್ ಕೆ.ಎನ್. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News