×
Ad

ಪ್ಲಾಸ್ಟಿಕ್ ನಿರ್ಮೂಲನದ ಬಗೆ ಜಾಗೃತಿ ಸಮಾವೇಶ

Update: 2018-11-24 23:10 IST

ಉಳ್ಳಾಲ, ನ. 24:  ಹಳೆಕೋಟೆ ಅನುದಾನಿತ ಸಯ್ಯದ್ ಮದನಿ ಉರ್ದು ಹಿ.ಪ್ರಾ. ಶಾಲೆ ಮತ್ತು ಸಯ್ಯದ್ ಮದನಿ ಪ್ರೌಢ ಶಲೆಯ ವತಿಯಿಂದ ಪ್ಲಾಸ್ಟಿಕ್  ನಿರ್ಮೂಲನದ ಬಗೆ ಜಾಗೃತಿ ಸಮಾವೇಶ ಮತ್ತು ಶಾಲೆ ಬಿಟ್ಟುಹೋದ ಮಕ್ಕಳ ಸಮೀಕ್ಷೆ ಮಾಹಿತಿ ಕಾರ್ಯಕ್ರಮ ಶನಿವಾರ ನಡೆಯಿತು

ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್  ಹಾಜಿ  ಅವರು  ಮಕ್ಕಳು ಸಂಗ್ರಹ ಮಾಡಿದ ತ್ಯಾಜ್ಯವನ್ನು ಉಳ್ಳಾಲ ನಗರಸಭೆಯ ಆಯುಕ್ತ  ವಾಣಿ ವಿ. ಆಳ್ವವರಿಗೆ ಕೊಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಅವರು, ಪ್ಲಾಸ್ಟಿಕ್ ನಿರ್ಮೂಲನದ ಬಗ್ಗೆ ಜಾಗೃತಿ ಸಮಾವೇಶ ವಿದ್ಯಾರ್ಥಿಗಳಿಗೆ  ಬಹಳಷ್ಟು ಅನುಕೂಲವಾಗಲಿದ್ದು, ಇನ್ನು ಮುಂದೆ  ನಮ್ಮ ಮನೆಯಲ್ಲಿ ಅಥವಾ ಪರಿಸರದಲ್ಲಿ ಎಲ್ಲಿಯೂ ಕಸ ಕಂಡರೂ ಅದನ್ನು ತೆಗೆದು ಶೇಖರಣೆ  ಮಾಡುವ ಕೆಲಸ ಮಕ್ಕಳಿಂದ ಆಗಲಿದೆ ಎನ್ನುವ ನಂಬಿಕೆ ನನಗಿದೆ ಎಂದರು. 

ಉಳ್ಳಾಲ ನಗರಸಭಾ ಆಯುಕ್ತ ವಾಣಿ ಮಾತನಾಡಿದರು. ಸ್ವಚ್ಛತಾ ರಾಯಬಾರಿ ಶೀನ ಶೆಟ್ಟಿ ಪ್ಲಾಸ್ಟಿಕ್  ತ್ಯಾಜ್ಯದ ಬಗ್ಗೆ ಮಾಹಿತಿ ನೀಡಿದರು. 
ಸ್ವಚ್ಛತಾ ರಾಯಬಾರಿ ಕೃಷ್ಣ ಮೂಲ್ಯ , ಉಳ್ಳಾಲ ದರ್ಗಾದ ಪ್ರ.ಕಾರ್ಯದರ್ಶಿ ಮಹಮ್ಮದ್ ತ್ವಾಹಾ, ಉಳ್ಳಾಲ ಸಯ್ಯದ್  ಮದನಿ ಚಾರಿಟೇಬಲ್ ಟ್ರಸ್ಟ್‍ನ ಉಪಾಧ್ಯಕ್ಷ ಇಬ್ರಾಹಿಂ ಕಕ್ಕೆತೋಟ, ಉಳ್ಳಾಲ ನಗರ ಸಭೆಯ  ಸದಸ್ ಝರೀನಾ, ರವೂಫ್,  ಮಾಜಿ ಸದಸ್ಯ ಫಾರೂಕ್ ಉಳ್ಳಾಲ, ಉಳ್ಳಾಲ ಚಾರಿಟೇಬಲ್ ಟ್ರಸ್ಟ್‍ನ ಆಡಳಿತಾಧಿಕಾರಿ ಅಬ್ದುಲ್ ಲತೀಫ್, ಉಳ್ಳಾಲ ಭಾರತ್ ಶಾಲೆಯ ನಿವೃತ್ತ ಶಿಕ್ಷಕ  ವಾಸುದೇವರಾವ್, ಶಿಕ್ಷಣ ಸಂಯೋಜಕಿ  ನಳಿನಿ, ಕೋಟೆಪುರ  ಟಿಪ್ಪು ಸುಲ್ತಾನ್  ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಎಂ.ಎಚ್. ಮಲಾರ್, ಗಂಗಾಧರ್ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಕೆಎಂಕೆ ಮಂಜನಾಡಿ  ಸ್ವಾಗತಿಸಿ  ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾರ ಮುಖ್ಯೋಪಾಧ್ಯಾಯಿನಿ ಸೌಮ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News