×
Ad

ಜೋಯ್‍ಲ್ಯಾಂಡ್ ಶಾಲೆಯಲ್ಲಿ ಶಿಕ್ಷಕರ ಜತೆ ಸಮಾಲೋಚನೆ

Update: 2018-11-24 23:21 IST

ಉಳ್ಳಾಲ, ನ. 24: ಜಮಾತೆ ಇಸ್ಲಾಂ ಹಿಂದ್ ಇದರ ಆಶ್ರಯದಲ್ಲಿ ಧಾರ್ಮಿಕ ಸಹಬಾಳ್ವೆ ಮತ್ತು ಸಾಮರಸ್ಯದ ಬಗ್ಗೆ ಕೊಲ್ಯ ಜೋಯ್‍ಲ್ಯಾಂಡ್ ಶಾಲೆಯಲ್ಲಿ  ಶಿಕ್ಷಕರ ಸಮಾಲೋಚನೆ ವಿಶೇಷ ಕಾರ್ಯಕ್ರಮ ಶನಿವಾರ ನಡೆಯಿತು. 

 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ  ಜಮಾತೆ ಇಸ್ಲಾಮಿ ಹಿಂದ್‍ನ ನಾಯಕ  ಮಹಮ್ಮದ್ ಮುಬೀನ್ ಅವರು, ನಾವೆಲ್ಲ ಸೌಹಾರ್ದತೆಯನ್ನು ಬೆಳೆಸಬೇಕಾಗಿದೆ. ಜಮಾತೆ ಇಸ್ಲಾಮಿ ಹಿಂದ್ ಈದ್ ಸೌಹಾರ್ದ ಕೂಟ, ದೀಪಾವಳಿ ಸೌಹಾರ್ದ ಕೂಟ, ಕ್ರಿಸ್‍ಮಸ್ ಸೌಹಾರ್ದ ಕೂಟ ಮಾಡುವ ಮೂಲಕ ಧರ್ಮದ ಬಗ್ಗೆ ಪರಸ್ಪರ ಅರಿಯುವ ಉತ್ತಮ ವಾತಾವರಣ ನಿರ್ಮಿಸಿಕೊಡುತ್ತಿದೆ ಎಂದರು.

ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ  ಅಬ್ದುಲ್ ಕರೀಂ , ಉಪಾಧ್ಯಕ್ಷ ಅಬ್ದುಲ್ ರಹ್‍ಮಾನ್, ಬೋಳಾರ ಇನ್‍ಪೆಂಟ್ ಜಸಸ್ ಜೋಯ್‍ಲ್ಯಾಂಡ್ ಶಾಲೆಯ ಮುಖ್ಯೋಪಧ್ಯಾಯರಾದ ಸವಿತಾ ಜಲಂಧರ್ ಮೊದಲಾದವರು ಉಪಸ್ಥಿತರಿದ್ದರು. ಕೊಲ್ಯ ಜೋಯ್‍ಲ್ಯಾಂಡ್ ಶಾಲೆಯ ಮುಖ್ಯೊಪಾಧ್ಯಾಯರಾದ ವೀಣಾ ಭಟ್ ಸ್ವಾಗತಿಸಿದರು. ಇಸಾಕ್ ಹಸನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಜ್ಯೋತಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News