ಡಿ.2: ಮದರಂಗಿ ಪತ್ರಿಕೆಯಿಂದ ಬಹುಮಾನ ವಿತರಣೆ
ಮಂಗಳೂರು, ನ.25: ಮದರಂಗಿ ಕನ್ನಡ ಮಾಸ ಪತ್ರಿಕೆಯು ಈದ್ ಮಿಲಾದ್ ಪ್ರಯುಕ್ತ ಸಾರ್ವಜನಿಕರಿಗೆ ಏರ್ಪಡಿಸಿದ್ದ ಲೇಖನ ಸ್ಪರ್ಧೆಯಲ್ಲಿ ವಿಜೇತ ರಾದವರಿಗೆ ಹಾಗೂ ಮೆಚ್ಚುಗೆ ಪಡೆದವರಿಗೆ ಬಹುಮಾನ ವಿತರಣೆ ಹಾಗೂ ಡಾಕ್ಟರೇಟ್ ಪದವಿ ಪಡೆದ ಮದರಂಗಿ ಕನ್ನಡ ಮಾಸ ಪತ್ರಿಕೆ ನಿಕಟಪೂರ್ವ ಸಂಪಾದಕ ಡಾ.ಎಂ.ಎಸ್.ಎಂ.ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಕಕ್ಕಿಂಜೆ ಅವರಿಗೆ ಗೌರವಾರ್ಪಣೆ ಕಾರ್ಯುಕ್ರಮ ಡಿ.2ರಂದು ಬೆಳಗ್ಗೆ 10ಗಂಟೆಗೆ ನಗರದ ರೀಗಲ್ ಫ್ಲಾಝಾದಲ್ಲಿರುವ ಮದರಂಗಿ ಪತ್ರಿಕೆ ಕಚೇರಿಯಲ್ಲಿ ನಡೆಯಲಿದೆ.
‘ಆಧುನಿಕ ಜಗತ್ತಿಗೆ ಪೈಗಂಬರ್ ಸಂದೇಶದ ಪ್ರಸ್ತುತತೆ’ ಎಂಬ ವಿಷಯದಲ್ಲಿ ನಡೆದ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಉಪನ್ಯಾಸಕಿ ಮಿಸ್ರಿಯಾ ಐ.ಪಜೀರ್, ದ್ವಿತೀಯ ಸ್ಥಾನ ಪಡೆದ ರಹ್ಮತ್ ಪುತ್ತೂರು, ತೃತೀಯ ಸ್ಥಾನ ಪಡೆದ ರಮ್ಲತ್ ನಂದರಬೆಟ್ಟು ಹಾಗು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ನಿಝಾಂ ಗೋಳಿಪಡ್ಪು, ಎಂ.ಕೆ.ಸಿನಾನ್ ಅಜಿಲಮೊಗರು, ಪ್ರಶಾಂತ್ ಕುಮಾರ್ ಕಂಕನಾಡಿ, ಜುನೈದ್ ಕೂಡಿಗೆ ಮಡಿಕೇರಿ, ಅಕ್ಷತಾ ನಾಯಕ್ ಸುರತ್ಕಲ್, ಸಾಜಿದಾ ಬಜ್ಪೆ, ಎಂ.ಕೆ.ಮುಹಮ್ಮದ್ ರಫೀಕ್ ಕಲ್ಕಟ್ಟ ಅವರಿಗೆ ಬಹುಮಾನ ವಿತರಿಸಲಾಗುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಿಕೆಯ ಸಂಪಾದಕ ಕೆ.ಎ.ಅಬ್ದುಲ್ ಅಝೀಝ್ ಪುಣಚ ವಹಿಸಲಿದ್ದಾರೆ.
ಅತಿಥಿಗಳಾಗಿ ಆಝಾದ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಜಿ ಮನ್ಸೂರ್ ಅಹ್ಮದ್, ಎಸ್.ಎಂ.ಆರ್.ಗ್ರೂಪ್‌ನ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ,ಕಣಚೂರು ಸಮೂಹ ಸಂಸ್ಥೆಗಳ ನಿರ್ದೇಶಕ ಅಬ್ದುರ್ರಹ್ಮಾನ್ ಕಣಚೂರು, ಲೇಖಕ ಇಸ್ಮತ್ ಪಜೀರ್ ಭಾಗವಹಿಸಲಿದ್ದಾರೆ ಎಂದು ಮದರಂಗಿ ಮಾಸ ಪತ್ರಿಕೆ ವ್ಯವಸ್ಥಾಪಕ ಅಶ್ರಫ್ ದೇರಳಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.