ಕಾಸರಗೋಡು: ಸಚಿವರ ಪುತ್ರಿ ವಿವಾಹ ಸಮಾರಂಭ, ಜಿಲ್ಲೆಗೆ ಆಗಮಸಿದ ಸಚಿವರ ದಂಡು

Update: 2018-11-25 12:20 GMT

ಕಾಸರಗೋಡು, ನ. 25: ಕಂದಾಯ ಸಚಿವ ಇ.ಚಂದ್ರಶೆಖರನ್, ಸಾವಿತ್ರಿ ದಂಪತಿ ಪುತ್ರಿ ನೀಲಿಚಂದ್ರ ಅವರ ವಿವಾಹವು ಕಾಸರಗೋಡು ಟೌನ್ ಹಾಲಿನಲ್ಲಿ ರವಿವಾರ ನಡೆಯಿತು.

ಚಮ್ಮಟಂಬಯಲು ಕುಂಞಿ ಕೃಷ್ಣನ್ ನಾಯರ್-ಸರಸಮ್ಮ ದಂಪತಿ ಪುತ್ರ ವಿಷ್ಣು ಅವರನ್ನು ನೀಲಿಚಂದ್ರ ವಿವಾಹಿತರಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಹಿತ ಕೇರಳ ಸಚಿವರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು.

ಸಚಿವರಾದ ತೋಮಸ್ ಐಸಾಕ್, ಇ.ಪಿ ಜಯರಾಜನ್, ಎ.ಕೆ ಬಾಲನ್, ಜಿ.ಸುಧಾಕರನ್, ಎ.ಸಿ ಮೊಯ್ದೀನ್, ಆರೋಗ್ಯ ಸಚಿವೆ ಕೆ.ಕೆ ಶೈಲಜಾ, ವಿ.ಎಸ್ ಸುನಿಲ್ ಕುಮಾರ್, ಕೆ.ರಾಜು, ಎ.ಕೆ ಶಶೀಂದ್ರನ್, ಟಿ.ಪಿ ರಾಮಕೃಷ್ಣನ್, ಕಡಕಂಪಳ್ಳಿ ರಾಮಚಂದ್ರನ್, ಕೆ.ಟಿ ಜಲೀಲ್, ಎಂ.ಎಂ ಮಣಿ, ಕಡನಪಳ್ಳಿ ರಾಮಚಂದ್ರನ್, ಸಭಾಪತಿ ಶ್ರೀರಾಮಕೃಷ್ಣನ್, ಉಪ ಸಭಾಪತಿ ಪಿ.ಶಶಿ ಸೇರಿದಂತೆ ರಾಜ್ಯ ಸಿಪಿಎಂ ಪ್ರಧಾನ ಕಾರ್ಯದರ್ಶಿ ಕೊಡೆಯೇರಿ ಬಾಲಕೃಷ್ಣನ್ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನವ ವಧು-ವರರನ್ನು ಆಶೀರ್ವದಿಸಿದರು.

ಮುಖ್ಯಮಂತ್ರಿ ವಿಜಯನ್ ಅವರ ಪತ್ನಿ ವಾಸಂತಿ, ರಾಜಕೀಯ ಕಾಯದರ್ಶಿ ಎಂ.ವಿ ಜಯರಾಜನ್, ಸಿ.ದಿವಾಕರನ್, ಕೆ.ಟಿ ಮೋಹನನ್, ಸಿಪಿಐ ನೇತಾರ ಪನ್ಯನ್ ರವೀಂದ್ರನ್, ಸಂಸದರಾದ ಪಿ.ಕರುಣಾಕರನ್, ಶ್ರೀಮತಿ ಟೀಚರ್, ಶಾಸಕ ಎನ್.ಎ ನೆಲ್ಲಿಕುನ್ನು, ಎಂ.ಸಿ ಖಮರುದ್ದೀನ್, ಹಕೀಂ ಕುನ್ನಿಲ್, ಆಸೀಸ್ ಕಡಪ್ಪುರ ಸೇರಿದಂತೆ ವಿವಿಧ ರಾಜಕೀಯ ಪಕ್ಷ ಪ್ರತಿನಿಧಿಗಳು ವಿವಾಹ ಸಮಾರಂಭಕ್ಕೆ ಆಗಮಿಸಿದ್ದರು.

ರವಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮುಖ್ಯಮಂತ್ರಿ ವಿವಾಹ ಸಮಾರಂಭಕ್ಕೆ ಆಗಮಿಸಿದ್ದರು. ನಂತರ ಉಕ್ಕಿನಡ್ಕದಲ್ಲಿ ನಡೆದ ಕಾಸರಗೋಡು ವೈದ್ಯಕೀಯ ಕಾಲೇಜಿನ ಶಿಲಾನ್ಯಾಸ ನೆರವೇರಿಸಿದರು. ಬಿಜೆಪಿ ಜಿಲ್ಲಾ ಸಮಿತಿ ಶಬರಿಮಲೆ ವಿಚಾರದಲ್ಲಿ ಮುಖ್ಯಮಂತ್ರಿಗಳ ದಿಗ್ಬಂಧನಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಹೆಚ್ಚಿನ ಪೋಲಿಸ್ ಭದ್ರತೆ ಒದಗಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News