ಅಂಪಾರು ಕಟ್ಟಡ ಕಾರ್ಮಿಕರ ವಾರ್ಷಿಕ ಮಹಾಸಭೆ
Update: 2018-11-25 22:29 IST
ಉಡುಪಿ, ನ.25: ಅಂಪಾರು ಕಟ್ಟಡ ಕಾರ್ಮಿಕರ ವಾರ್ಷಿಕ ಮಹಾಸಭೆ ಅಂಪಾರು ಗ್ರಾಮದ ಜನತಾ ಕಾಲೋನಿಯಲ್ಲಿ ಇಂದು ಜರಗಿತು.
ಸಭೆಯನ್ನುದ್ದೇಶಿಸಿ ಕಟ್ಟಡ ಸಂಘದ ತಾಲೂಕು ಮಾಜಿ ಜತೆ ಕಾರ್ಯದರ್ಶಿ ಚಂದ್ರ ಮೂಡುಬಗೆ ಮಾತನಾಡಿ, ನ.27ರಿಂದ ನಡೆಯುವ ಮರಳಿಗಾಗಿ ಹಗಲು ರಾತ್ರಿ ಹೋರಾಟದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಶೇಖರ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ತಾಲೂಕು 12ನೆ ಮಹಾಸಭೆಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಸಂಘದಿಂದ ನಿವೃತ್ತಿಯಾದ ಹಿರಿಯರಾದ ನಾಗ ಮೊಗವೀರ ಅವರನ್ನು ಸನ್ಮಾನಿಸ ಲಾಯಿತು. ಘಟಕದ ವರದಿಯನ್ನು ಚಂದ್ರ ಮಂಡಿಸಿದರು.