ತಲ್ಲೂರು: ಅಪರಿಚಿತ ಮೃತದೇಹ ಪತ್ತೆ
Update: 2018-11-25 22:34 IST
ಕುಂದಾಪುರ, ನ. 25: ತಲ್ಲೂರು ಪಾರ್ಥಿಕಟ್ಟೆ ಎಂಬಲ್ಲಿ ಲಕ್ಷ್ಮೀ ವೆಂಕಟೇಶ ಐಸ್ ಪ್ಲಾಂಟ್ ಬಳಿಯ ರಸ್ತೆ ಬದಿಯಲ್ಲಿ ಪೊದೆಯಲ್ಲಿ ಸುಮಾರು 55 ರಿಂದ 60 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹವೊಂದು ನ.24ರಂದು ಮಧ್ಯಾಹ್ನ ವೇಳೆ ಪತ್ತೆಯಾಗಿದೆ.
ಮೃತರು ವಿಪರಿತ ಮದ್ಯಾಪಾನ ಮಾಡಿ ಬಿಸಿಲಿನಲ್ಲಿ ತೀವ್ರತೆಗೆ ಅಸ್ವಸ್ಥ ಗೊಂಡು ಮಲಗಿದಲ್ಲಿಯೇ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.