79ನೇ ಅಖಿಲ ಭಾರತ ಅಂತರ್ ವಿವಿ ಅಥ್ಲೆಟಿಕ್ ಕ್ರೀಡಾಕೂಟ: ದಾಖಲೆಗಳ ಮಹಾಪೂರ
ಮೂಡುಬಿದಿರೆ, ನ.25: ಮಂಗಳೂರು ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ 79ನೇ ಅಖಿಲ ಭಾರತ ಅಥ್ಲೆಟಿಕ್ಸ್ ಕ್ರೀಡಾಕೂಟದ ಮೊದಲ ದಿನದಲ್ಲಿ ದಾಖಲೆಗಳ ಮಹಾಪೂರ ಹರಿದಿದೆ.
20 ಕಿ.ಮೀ ನಡಿಗೆಯಲ್ಲಿಆಕಾಶ್ ಸಿಂಗ್(ಪಂಜಾಬ್ ವಿವಿ)-1, ನೀರಜ್ ಚೌರಾಸಿ(ಡಿಡಿಯು, ಘೊರಕ್ಪುರ್ ವಿವಿ)-2, ಹರ್ದೀಪ್(ಮಹರ್ಷಿ ದಯಾನಂದ ವಿವಿ)-3, ಲಲಿತ್ ಬಿಷ್ಠ್(ಕುಮಾಯುನ್ ವಿವಿ)-4, ಮನೋಜ್ ಜನಗಿಡ್(ಮಂಗಳೂರು ವಿವಿ)-5 ನೇ ಸ್ಥಾನ ಪಡೆದರೆ 5000 ಮೀಟರ್ ಓಟದಲ್ಲಿ (ಪುರುಷರ ವಿಭಾಗ)ಅಜಯ್ ಕುಮಾರ್ ಬಿಂದ್(ಮಂಗಳೂರು ವಿವಿ)-1, ಅಭಿನಂದ್ ಸುಂದ(ಕೇರಳ ವಿವಿ)-2, ಪಿಂಟು ಕುಮಾರ್ ಯಾದವ್(ವಿನೋಭ ಭಾವೆ ವಿವಿ)-3 ನೇ ಸ್ಥಾನ ಪಡೆದಿದ್ದಾರೆ.
5000 ಮೀಟರ್ ಓಟ (ಮಹಿಳೆಯರ ವಿಭಾಗ) ಆರತಿ ಪಾಟೀಲ್(ಸಾವಿತ್ರಿಬಾಯಿ ಫುಲೆ ವಿವಿ)-1, ಕೆ ಎಂ ಅಮ್ರಿತ ಪಟೇಲ್(ಮಹಾತ್ಮ ಗಾಂಧೀ ವಿವಿ)-2 , ಶ್ರುತಿ ಪ್ರಜಕ್ತ ಗೊಡ್ಬೋಲೆ(ನಾಗ್ಪುರ್ ವಿವಿ)-3ನೇ ಸ್ಥಾನ ಗಳಿಸಿದರೆ 400 ಮೀಟರ್ ಹರ್ಡಲ್ಸ್ ನಲ್ಲಿ (ಪುರುಷರ ವಿಭಾಗ) ಮಂಜೀತ್(ಗುರು ಜಂಬೇಶ್ವರ್ ವಿವಿ)-1, ಸುರೇಂದರ್(ಸಿಂಘಾನಿಯ ವಿವಿ)-2, ಗೌತಮ್ ಗುಪ್ತಾ(ಮಹಾತ್ಮ ಗಾಂಧೀ ವಿವಿ) 3ನೇ ಸ್ಥಾನ ಹಾಗೂ 400 ಮೀಟರ್ ಹರ್ಡಲ್ಸ್(ಮಹಿಳೆಯರ ವಿಭಾಗ)ಆರ್ ವಿಥ್ಯಾ (ಭಾರತಿಯರ್ ವಿವಿ)-1, ಸಾಲಿನಿ ವಿ ಕೆ(ಮಹಾತ್ಮ ಗಾಂಧೀ ವಿವಿ)-2, ನನ್ಹಿ(ಮಹರ್ಷಿ ದಯಾನಂದ ವಿವಿ) 3ನೇ ಸ್ಥಾನ ಪಡೆದಿದ್ದಾರೆ.
ಪುನರ್ ದಾಖಲೆ:
100 ಮೀಟರ್ ಓಟ ( ಪುರುಷರ ವಿಭಾಗ)
ವೇಗದ ಓಟಗಾರ ಆಳ್ವಾಸ್ ಕಾಲೇಜಿನ ಇಲಕ್ಯಾದಾಸನ್ 100 ಮೀಟರ್ ಓಟದಲ್ಲಿ ತನ್ನ ಹೆಸರಿನಲ್ಲೇ ಇದ್ದ ದಾಖಲೆಯನ್ನು ಪುನರ್‍ನಿರ್ಮಿಸಿದ್ದಾರೆ. 78ನೇ ಅಖಿಲ ಭಾರತ ಅಂತರ್ ವಿ.ವಿ,ಗುಂಟೂರರಲ್ಲಿ 10.49 ಸೆಕೆಂಡ್‍ನಲ್ಲಿ 100 ಮೀಟರ್‍ನ್ನು ಕ್ರಮಿಸಿ ಕೂಟ ದಾಖಲೆಯನ್ನು ನಿರ್ಮಿಸಿದ್ದರು. ಇದೀಗ 79ನೇ ಅಖಿಲ ಭಾರತ ಅಂತರ್ ವಿ.ವಿ ಯ 100 ಮೀಟರ್ ಓಟ 10.41 ಸೆಕೆಂಡನಲ್ಲಿ ಕ್ರಮಿಸಿ ಕೂಟ ದಾಖಲೆ ನಿರ್ಮಿಸಿದ್ದಾರೆ. ಇದೇ ಕೂಟದಲ್ಲಿ ಆಳ್ವಾಸ್ ಕಾಲೇಜಿನ ಪ್ರಜ್ವಲ್ ಮಂದಣ್ಣ 10.66 ಸೆಕೆಂಡನಲ್ಲಿ ಕ್ರಮಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
100 ಮೀಟರ್ ರೇಸ್ (ಮಹಿಳೆಯರ ವಿಭಾಗ) ಎನ್ ಎಸ್ ಸಿಮಿ(ಮಹಾತ್ಮ ಗಾಂಧೀ ವಿವಿ)-1, ಧನಲಕ್ಷ್ಮಿ ಎಸ್(ಭಾರತೀದಾಸನ್ ವಿವಿ)-2, ವಿ ರೇವತಿ(ಮಧುರೈ ವಿವಿ)-3 ನೇ ಸ್ಥಾನ ಗಳಿಸಿದರೆ 800 ಮೀಟರ್ ರೇಸ್ (ಪುರುಷರ ವಿಭಾಗ) ಎಂ ರಘುರಾಮ್(ಮದ್ರಾಸ್ ವಿವಿ)-1, ದೇವಯ್ಯಾ ಟಿ ಎಚ್(ಬೆಂಗಳೂರು ವಿವಿ)-2, ಗುರುಮನ್ ಸಿಂಗ್(ಪಂಜಾಬ್ ವಿವಿ)-3 ನೇ ಸ್ಥಾನ ಗಳಿಸಿದ್ದಾರೆ.
800 ಮೀಟರ್ ರೇಸ್ (ಮಹಿಳೆಯರ ವಿಭಾಗ) ಅಭಿತ ಮೇರಿ(ಕ್ಯಾಲಿಕಟ್ ವಿವಿ)-1, ತೆರೆಸಾ ಜೋಸೆಫ್(ಮಂಗಳೂರು ವಿವಿ)-2, ಹರ್ಮಿಲನ್ ಬೇನ್ಸ್(ಪಂಜಾಬ್ ವಿವಿ)-3 ನೇ ಸ್ಥಾನ ಪಡೆದರೆ
ಉದ್ಧ ಜಿಗಿತ (ಮಹಿಳೆಯರ ವಿಭಾಗ) ಹರ್ಷಿಣಿ ಸಾರವನ(ಮದ್ರಾಸ್ ವಿವಿ)-1, ಪ್ರಿಯಾಂಕ(ರಾಂಚಿ ವಿವಿ)-2, ರೇನು(ಪಂಜಾಬ್ ವಿವಿ)-3 ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
ದಿಸ್ಕಸ್ ಟ್ರೋ (ಮಹಿಳೆಯರ ವಿಭಾಗ) ಅರ್ಪನ್ ದೀಪಕ್ ಕೌರ್(ಗುರುನಾನಕ್ ದೇವ್ ವಿವಿ)-1, ಸೀಮಾ(ಸಿ ಬಿ ಎಲ್ ವಿವಿ)-2, ಕಾರುಣ್ಯಾ(ಮದ್ರಾಸ್ ವಿವಿ)-3 ನೇ ಸ್ಥಾನ ಪಡೆದಿದ್ದಾರೆ.
ಮಹಿಳೆಯರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಕ್ಯಾಲಿಕಟ್ ವಿವಿಯ ದೆವಸೇನಾ ಎಂಜೆಲ್ ಪಿ, 1.83 ಮೀಟರ್ ಜಿಗಿಯುವ ಮೂಲಕ ಹೊಸ ಕೂಟ ದಾಖಲೆ ನಿರ್ಮಿಸಿದರು. ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಮಂಗಳೂರು ವಿವಿಯ ಆಳ್ವಾಸ್ ಕಾಲೇಜಿನ ಅಭಿನಯ ಎಸ್ ಶೆಟ್ಟಿ( 1.77 ಮೀಟರ್), ಹಾಗೂ ಎಸ್ ಬಿ ಸುಪ್ರಿಯಾ( 1.77ಮೀಟರ್) ಪಡೆದುಕೊಂಡರು.