×
Ad

ಏನಾಜೆ ಮುನೀರುಲ್ ಇಸ್ಲಾಂ ಎಜುಕೇಶನಲ್ ಸೆಂಟರ್ ನಿಂದ 'ಮೀಲಾದ್ ಫೆಸ್ಟ್'

Update: 2018-11-26 13:01 IST

ಬಂಟ್ವಾಳ, ನ.26: ಬುಡೋಳಿ ಸಮೀಪದ ಏನಾಜೆ ಮುನೀರುಲ್ ಇಸ್ಲಾಂ ಎಜುಕೇಶನಲ್ ಸೆಂಟರ್ ಆಶ್ರಯದಲ್ಲಿ ಮೀಲಾದುನ್ನಬಿ ಹಾಗೂ ಮೀಲಾದ್ ಫೆಸ್ಟ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. 

ಮುನೀರುಲ್ ಇಸ್ಲಾಂ ಮದ್ರಸಾ ವಠಾರದ ಶಂಸುಲ್ ಉಲಮಾ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಖತೀಬ್ ಅಬ್ದುಲ್ ‌ಮಜೀದ್ ದಾರಿಮಿ ದುಆಗೈದರು. ಅಧ್ಯಾಪಕ ಅಬ್ದುಲ್ ಜಲೀಲ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿದರು.‌

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಅಧ್ಯಾಪಕ ಉಸ್ಮಾನ್ ದಾರಿಮಿ‌ ಪೆರ್ನೆ, ಅಬೂಬಕರ್ ಸಿದ್ದೀಕ್ ಫೈಝಿ, ಎಂಇಸಿ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಸತ್ತಿಕ್ಕಲ್ಲು, ಮಾಜಿ ಅಧ್ಯಕ್ಷ ಇಬ್ರಾಹೀಂ ಮಡಲ, ಹೈದರ್ ಗಡಿಯಾರ್, ಉಮರ್ ಏನಾಜೆ, ಇಸ್ಮಾಯೀಲ್ ಉಪಸ್ಥಿತರಿದ್ದರು.

ನಂತರ ಮದ್ರಸಾ ವಿದ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮ ನಡೆಯಿತು. ದರ್ಸ್ ವಿದ್ಯಾರ್ಥಿನಿಯರಿಗೆ ಕಮಿಸ್ ವಿತರಣೆ, ಸರ್ಟಿಫಿಕೇಟ್ ವಿತರಣೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.

ಇಬ್ರಾಹೀಂ ಹಂಝ ಹಾದಿ ತಂಙಳ್ ಪಾಟ್ರಕೋಡಿ ಮೌಲಿದ್ ಪಾರಾಯಣದ ನೇತೃತ್ವ ವಹಿಸಿದ್ದರು. ಪತ್ರಕರ್ತ ಶಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News