×
Ad

ಕಳ್ಳಿಗೆ: ಕೆರೆಗೆ ಸ್ನಾನ ಮಾಡಲು ತೆರಳಿದ್ದ ವ್ಯಕ್ತಿ ಮುಳುಗಿ ಮೃತ್ಯು

Update: 2018-11-26 15:01 IST

ಬಂಟ್ವಾಳ, ನ.26: ಸ್ನೇಹಿತರೊಂದಿಗೆ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕಳ್ಳಿಗೆ ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ.

ಕಳ್ಳಿಗೆ ಗ್ರಾಮದ ಕನಪ್ಪಾಡಿ ನಿವಾಸಿ ಸೇಸಪ್ಪಪೂಜಾರಿ (55) ಮೃತಪಟ್ಟವರಾಗಿದ್ದಾರೆ.

ಸೇಸಪ್ಪ ಪೂಜಾರಿ ರವಿವಾರ ರಾತ್ರಿ 8 ಗಂಟೆಯ ಸುಮಾರಿಗೆ ಮನೆಯಲ್ಲಿ ಭತ್ತದ ಕೆಲಸ ಮುಗಿಸಿ ತನ್ನ ನಾಲ್ವರು ಸ್ನೇಹಿತ ಕೆಲಸಗಾರರ ಜೊತೆ ಅಲ್ಲೇ ಸಮೀಪದ ಕೆರೆಯಲ್ಲಿ ಸ್ನಾನ ಮಾಡಲು ತೆರಳಿದ್ದರು ಎನ್ನಲಾಗಿದೆ.

ಈಜಲು ಗೊತ್ತಿರುವ ಸೇಸಪ್ಪ, ಕೆರೆಯ ಆಳಕ್ಕೆ ಹೋದರವರು ಕೆಸರಿನಲ್ಲಿ ಹೂತು ಮೃತಪಟ್ಟಿದ್ದಾರೆನ್ನಲಾಗಿದೆ.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News