×
Ad

​ಎಂಎಂಸಿಎ ವತಿಯಿಂದ ಕಲಾಸಂಗಮ ಕಾರ್ಯಕ್ರಮ

Update: 2018-11-26 18:04 IST

ಮಂಗಳೂರು, ನ.26: ಮಂಗಳೂರು ಮ್ಯೂಸಿಕಲ್ ಕಲ್ಚರಲ್ ಅಸೋಸಿಯೇಶನ್(ಎಂಎಂಸಿಎ) ವತಿಯಿಂದ ಲೋವರ್ ಬೆಂದೂರ್‌ನ ಗೀತಾಂಜಲಿಯಲ್ಲಿ ಇತ್ತೀಚೆಗೆ ಕಲಾ ಸಂಗಮ -2018 ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಿತು.

ಗುಡ್ ಶೆಫರ್ಡ್ ಸಿಲ್ವರ್ ಜುಬಿಲಿ ಪುರಸ್ಕಾರವನ್ನು ಸಂಸ್ಥೆಯ ಪರವಾಗಿ ನಿಕಟಪೂರ್ವ ಬಿಷಪ್ ವಂ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ನೀಡಿ ಸನ್ಮಾನಿಸಲಾಯಿತು.

ಸರ್ವಿಸ್ ವಿದ್ ಸ್ಮೈಲ್ ಪ್ರಶಸ್ತಿಯನ್ನು ಲಿಡಿಯಾ ಡಿಸೋಜ ಮತ್ತು ಇರೆನ್ ಸೆರಾವೊ ಅವರಿಗೆ ನೀಡಲಾಯಿತು. ಕಲಾರತ್ನ ಪ್ರಶಸ್ತಿ (ಸ್ವರೂನ್ ಸ್ಮರಣಾಂಜಲಿ)ಯನ್ನು ಮೋಹನ್‌ರಾಜ್‌ಗೆ ಹಾಗೂ ಎಂಎಂಸಿಎ ಗಾರ್ಡಿಯನ್ ಏಜೆಂಲ್ ಪ್ರಶಸ್ತಿಯನ್ನು ಶೋನಾ ಮೊಂತೆರೊಗೆ, ಬಂಧುತ್ವ ಮಾನವ ಸಂಬಂಧ ಪ್ರಶಸ್ತಿಯನ್ನು ಎ.ಎಂ.ನರಹರಿ ಮತ್ತು ಉದಯ ಕುಮಾರ್ ಅವರಿಗೆ ನೀಡಲಾಯಿತು.

ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣೆ ನೀಡಿ ಅವರ ವ್ಯಕ್ತಿತ್ವ ರೂಪಿಸುವಲ್ಲಿ ಗಣನೀಯ ಸಾಧನೆ ತೋರಿದ ಎಂ. ರೋಶನ್‌ಗೆ ಮೆರಿಟೋರಿಯಸ್ ಸರ್ವಿಸಸ್ ಪ್ರಶಸ್ತಿ ನೀಡಿ ಗೌರಸಲಾಯಿತು. ಕ್ಯಾಪ್ಟನ್ ಹಗ್ ವಾಸ್ ಮತ್ತು ದೊರೊಂತಿ ವಾಸ್, ಮಾಜಿ ಶಾಸಕ ಜೆ.ಆರ್.ಲೋಬೊ ಮತ್ತು ಫಿಲೋಮಿನಾ ಲೋಬೊ ಅವರಿಗೆ ಗುಡ್ ಸಮರಿಥಾನ್ ದಂಪತಿ ಪ್ರಶಸ್ತಿ ನೀಡಲಾಯಿತು.

ಈ ಸಂದರ್ಭ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಫಾ.ವಿಲ್ಫ್ರೆಡ್ ಪ್ರಕಾಶ್ ಡಿಸೋಜ, ಫಾ.ಪಿಯೂಸ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News