×
Ad

​ಅಬುದಾಬಿ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಸಾಧನೆ

Update: 2018-11-26 18:38 IST

ಉಡುಪಿ, ನ.26: ಅಬುದಾಬಿ ವಿನ್ನರ್ ಕರಾಟೆ ಕ್ಲಬ್ ನ.23ರಂದು ಅಬುದಾಬಿಯಲ್ಲಿ ಏರ್ಪಡಿಸಿದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧಾ ಕೂಟದಲ್ಲಿ ಉಡುಪಿ ಜಿಲ್ಲಾ ತಂಡವು ಐದು ಚಿನ್ನ, ಮೂರು ಬೆಳ್ಳಿ, ಆರು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.

ಚಂದ್ರನಗರ ಕ್ರೆಸೆಂಟ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಮುಹಮ್ಮದ್ ಅದ್ನಾನ್ ಎರಡು ಚಿನ್ನ, ಮುಹಮ್ಮದ್ ಶಾಹಿದ್ ಅಫ್ರಿದಿ ಒಂದು ಚಿನ್ನ, ಒಂದು ಕಂಚು, ಮುಹಮ್ಮದ್ ಸಾಯಿದ್ ಒಂದು ಬೆಳ್ಳಿ, ಒಂದು ಕಂಚು, ಎರ್ಮಾಳ್ ವಿದ್ಯಾ ಪ್ರಭೋದಿನಿ ಸ್ಕೂಲ್‌ನ ಆದಿತ್ಯ ಜೆ.ಕರ್ಕೇರ ಒಂದು ಚಿನ್ನ, ಒಂದು ಬೆಳ್ಳಿ, ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆಯ ಧ್ಯಾನ್ ಪ್ರವೀಣ್ ಪೂಜಾರಿ ಒಂದು ಚಿನ್ನ, ಒಂದು ಕಂಚು, ಕೋಡಿ ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್‌ನ ಅಬ್ದುಲ್ ಅಹಾದ್ ಒಂದು ಬೆಳ್ಳಿ, ಒಂದು ಕಂಚು, ಉಚ್ಚಿಲ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ನಿತಿನ್ ಎಚ್.ಶೆಟ್ಟಿ ಎರಡು ಕಂಚಿನ ಪದಕಗಳನ್ನು ಪಡೆದಿದ್ದಾರೆ.

ಈ ಸ್ಪರ್ಧಾಕೂಟದಲ್ಲಿ ತೀರ್ಪುಗಾರರಾಗಿ ಒಲಿಂಪಿಕ್ಸ್ ಗೇಮ್ಸ್ ರೆಫರಿ, ವಲ್ಡ್ ಕರಾಟೆ ಫೆಡರೇಶನ್ ರೆಫರಿ ರೆಂಚಿ ಪರಮಜೀತ್ ಸಿಂಗ್ ಭಾಗವಹಿಸಿದ್ದರು. ಈ ವಿದ್ಯಾರ್ಥಿಗಳಿಗೆ ಜಪಾನ್ ಶೊಡೊಕಾನ್ ಕರಾಟೆ ಕನ್ನಿಂಜುಕು ಆರ್ಗ ನೈಝೇಶನ್ ಇಂಡಿಯಾ ಇದರ ಕರ್ನಾಟಕ ರಾಜ್ಯದ ಮುಖ್ಯ ಶಿಕ್ಷಕ ಮತ್ತು ಪರೀಕ್ಷಕರಾದ ಶಂಶುದ್ದೀನ್ ಎಚ್.ಶೇಕ್ ತರಬೇತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News