ಚಿದಂಬರಂ ವಿರುದ್ಧ ಕಾನೂನುಕ್ರಮಕ್ಕೆ ಸಿಬಿಐಗೆ ಅನುಮತಿ, ಡಿ.18ರವರೆಗೆ ಬಂಧನವಿಲ್ಲ

Update: 2018-11-26 15:11 GMT

 ಹೊಸದಿಲ್ಲಿ,ನ.26:ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಕಾನೂನುಕ್ರಮಕ್ಕೊಳಪಡಿಸಲು ಸಂಬಂಧಿಸಿದ ಅಧಿಕಾರಿಗಳ ಅನುಮತಿಯನ್ನು ತಾನು ಪಡೆದುಕೊಂಡಿರುವುದಾಗಿ ಸಿಬಿಐ ಸೋಮವಾರ ದಿಲ್ಲಿಯ ನ್ಯಾಯಾಲಯಕ್ಕೆ ತಿಳಿಸಿತು.

ಆದರೆ ಪ್ರಕರಣದಲ್ಲಿಯ ಇತರ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ಪಡೆದುಕೊಳ್ಳಲು ತನಗೆ ಎರಡು ವಾರಗಳ ಸಮಯಾವಕಾಶ ಅಗತ್ಯವಿದೆ ಎಂದು ಸಿಬಿಐ ತಿಳಿಸಿದ ಬಳಿಕ ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಬಂಧನಕ್ಕೆ ತಾನು ನೀಡಿರುವ ತಡೆಯಾಜ್ಞೆಯನ್ನು ನ್ಯಾಯಾಲಯವು ಡಿ.18ರವರೆಗೆ ವಿಸ್ತರಿಸಿತು.

ಏರ್‌ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯ ಅನುಮತಿ ಮಂಜೂರು ಮಾಡುವಲ್ಲಿ ನಡೆದಿವೆ ಎನ್ನಲಾಗಿರುವ ಅಕ್ರಮಗಳ ಬಗ್ಗೆ ಸಿಬಿಐ ಮತ್ತು ಅಕ್ರಮ ಹಣ ವಹಿವಾಟು ಕುರಿತು ಜಾರಿ ನಿರ್ದೇಶನಾಲಯ ತನಿಖೆಗಳನ್ನು ನಡೆಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News