×
Ad

ಅಖಿಲ ಭಾರತ ವಿ.ವಿ 39ನೇ ಅಥ್ಲೆಟಿಕ್ಸ್ : ಅತಿಥೇಯ ಮಂಗಳೂರು ಮುನ್ನಡೆ

Update: 2018-11-26 20:59 IST
ಪೂನಂ ರಾಣಿ, ಜೈ ಷಾ

ಮೂಡುಬಿದಿರೆ, ಟಿ.26: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಮಂಗಳೂರು ವಿಶ್ವವಿದ್ಯಾಲಯ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ವಿ.ವಿ 39ನೇ ಅಥ್ಲೆಟಿಕ್ಸ್ ನ ಮೂರನೇ ದಿನ ಕೂಡ ಅತಿಥೇಯ ಮಂಗಳೂರು ವಿಶ್ವ ವಿದ್ಯಾಲಯ ಮುನ್ನಡೆ ಸಾಧಿಸಿದೆ.

ಅತಿಥೇಯ ವಿ.ವಿ, ಆಳ್ವಾಸ್‍ನ ಕ್ರೀಡಾಪಟು ಪೂನಂ ಜಾವಲಿನ್ ಥ್ರೋನಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. ಮುಂಬೈ ವಿ.ವಿ ಕ್ರೀಡಾಪಟು ಜೈ ಷಾ ಕೂಟ ತ್ರಿಪಲ್ ಜಂಪ್‍ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಜಾವಲಿನ್ ಥ್ರೋನಲ್ಲಿ ಆಳ್ವಾಸ್‍ನ ಪೂನಂ ರಾಣಿ 53.67 ಮೀಟರ್ ಎಸೆದು ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ 2013ರಲ್ಲಿ ಸಿಸಿಎಸ್‍ಯು ಮೀರತ್‍ನ ಅನ್ನು ರಾಣಿ 52.64 ಮೀಟರ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. 

ಜೆಷಾ ತ್ರಿಪಲ್‍ಜಂಪ್‍ನಲ್ಲಿ 16.36 ಮೀಟರ್ ಜಿಗಿದು, 2017ರಲ್ಲಿ ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿದ್ದ ಆಳ್ವಾಸ್ ಕ್ರೀಡಾಪಟು ಶ್ರೀಜಿತ್ ಮೋಹನ್ ಅವರ 16.05 ದಾಖಲೆಯನ್ನು ಹಿಂದಿಕ್ಕಿದ್ದಾರೆ. ರವಿವಾರ ಮೂರು ಕೂಟ ದಾಖಲೆಗಳಾಗಿದ್ದು, ಮೂರನೇ ದಿನ ಒಂದು ಕೂಟ ದಾಖಲೆಯಾಗುವುದರೊಂದಿಗೆ ಎರಡು ದಿನಗಳಲ್ಲಿ ಒಟ್ಟು ಐದು ಕೂಟ ದಾಖಲೆಗಳಾಗಿವೆ. ಮೊದಲ ದಿನ ಆಳ್ವಾಸ್ ಆಳ್ವಾಸ್‍ನ ಇಲಕ್ಯಾದಾಸನ್ 100ಮೀ. ಓಟದಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿ `ವೇಗದ ಓಟಗಾರ' ಗೌರವಕ್ಕೆ ಪಾತ್ರರಾಗಿದ್ದರು. ಮಂಗಳವಾರ ಆಳ್ವಾಸ್‍ನ ಮತ್ತೊಬ್ಬ ಕ್ರೀಡಾಪಟು ದಾಖಲೆ ನಿರ್ಮಿಸುವರೊಂದಿಗೆ ಐದು ಕೂಟ ದಾಖಲೆಗಳಲ್ಲಿ ಆಳ್ವಾಸ್ ಕ್ರೀಡಾಪಟುಗಳು 2 ಹೊಸ ಕೂಟ ದಾಖಲೆಗಳನ್ನು ನಿರ್ಮಿಸಿದ್ದಾರೆ. 400 ಮೀಟರ್ ಓಟದಲ್ಲಿ ಆಳ್ವಾಸ್‍ನ ರೋಹನ್. ಡಿ. ಕುಮಾರ್ ದ್ವಿತೀಯ ಸ್ಥಾನ ಪಡೆದರು. ಆಳ್ವಾಸ್‍ನ ವನಮ್ ಶರ್ಮ 51.76 ಮೀಟರ್ ಚಕ್ರ ಎಸೆಯುವ ಮುಖೇನ ರಜತ ಪದಕ ತಮ್ಮದಾಗಿಸಿಕೊಂಡರು. ಪ್ರವೀಣ್ ಟ್ರಿಪಲ್ ಜಂಪ್‍ನಲ್ಲಿ 16.05 ಮೀಟರ್ ಜಿಗಿಯುವ ಮೂಲಕ ದ್ವಿತೀಯ ಸ್ಥಾನ ಪಡೆದರು.

-----------
ಫಲಿತಾಂಶ
ಜಾವಲಿನ್ ಥ್ರೋ- ಭರ್ಜಿ ಎಸೆತ(ಮಹಿಳೆಯರ ವಿಭಾಗ)
1. ಪೂನಂ ರಾಣಿ- ಮಂಗಳೂರು ವಿವಿ- 53.67 ಮೀ- ನೂತನ ಕೂಟ ದಾಖಲೆ
2. ಸಲೋನಿ- ಎಂ. ಜೆ. ಪಿ. ಆರ್. ವಿವಿ, ಬರೇಲಿ-48.25
3. ಪುಷ್ಪ ಜಕಾರ್- ಎಂ. ಈ. ಎಸ್ ವಿವಿ, ಬಿಕನೇರ್-47.44

ಟ್ರಿಪಲ್ ಜಂಪ್(ಪುರುಷರ ವಿಭಾಗ)
1. ಜೈಷಾ- ಮುಂಬೈ ವಿವಿ- 16.36 ಮೀಟರ್ - ಕೂಟ ದಾಖಲೆ
2. ಪ್ರವೀಣ್-  ಮಂಗಳೂರು ವಿವಿ- 16.05 ಮೀಟರ್
3. ಜಿ. ಕಿರುಬ - ಅಣ್ಣಾ ವಿವಿ -15.78

ಮೂರನೇ ದಿನದ ಫಲಿತಾಂಶ: 
20 ಕಿಲೋಮೀಟರ್ ನಡಿಗೆ ಓಟ ಸ್ಪರ್ಧೆ(ಮಹಿಳೆಯರ ವಿಭಾಗ)
1. ರವೀನಾ - 2550- ಮಹರ್ಷಿ ದಯಾನಂದ ವಿವಿ, ರೋಟಕ್-1:43:58.64 
2. ಸೋನಲ್ ಸುಖ್‍ವಾಲ್ - 2815- ಮೋಹನ್‍ಲಾಲ್ ಸುಖಾಡಿಯಾ ವಿವಿ, ಉದಯ್‍ಪುರ್ - 1:47:14.53
3. ಕೆ. ಎಮ್. ಪ್ರಿಯಾಂಕಾ - 2600- ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಮ್- 1:49:21.85

ಡಿಸ್ಕಸ್ ಥ್ರೋ - ಚಕ್ರ ಎಸೆತ(ಪುರುಷರ ವಿಭಾಗ)
1. ಬೆನಕೆ ಕೀರ್ತಿಕುಮ್ - ಶಿವಾಜಿ ವಿವಿ- 52.59 ಮೀಟರ್
2. ವನಮ್ ಶರ್ಮ - ಮಂಗಳೂರು ವಿವಿ- 51.76 ಮೀಟರ್
3. ಪರಮ್‍ಜೇತ್ - ಕಳಿಂಗ ವಿವಿ- 49.22 ಮೀಟರ್

400 ಮೀಟರ್ ಓಟ(ಪುರುಷರ ವಿಭಾಗ)
1. ಆರ್. ರಾಜೇಶ್- ಮದ್ರಾಸ್ ವಿವಿ- 47.68 ಸೆಕೆಂಡ್ಸ್
2. ರೋಹನ್. ಡಿ. ಕುಮಾರ್ - ಮಂಗಳೂರು ವಿವಿ- 48.02 ಸೆಕೆಂಡ್ಸ್
3. ಕದಮ್ ರಾಹುಲ್ - ಮುಂಬೈ ವಿವಿ- 48.12 ಸೆಕೆಂಡ್ಸ್

400 ಮೀಟರ್ ಓಟ(ಮಹಿಳೆಯರ ವಿಭಾಗ)
1. ಶಾಲಿನಿ ವಿ.ಕೆ- ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಂ- 54.21 ಸೆಕೆಂಡ್ಸ್
2. ಜೆರಿನ ಜೋಸೆಫ್-  ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಂ- 54.45 ಸೆಕೆಂಡ್ಸ್
3. ಆರ್. ವಿತ್ಯ -ಭಾರತಿಯಾರ್ ವಿವಿ- 54.48 ಸೆಕೆಂಡ್ಸ್

ಡೆಕಥ್ಲಾನ್ ಸ್ಪರ್ಧೆಯಲ್ಲಿ ಆಳ್ವಾಸ್‍ಗೆ ಚಿನ್ನ
1. ಕೃಷ್ಣ ಕುಮಾರ್- ಮಂಗಳೂರು ವಿವಿ (6906 ಪಾಂಯ್ಟ್ಸ್) ನೂತನ ಕೂಟ ದಾಖಲೆ
2. ವಿಕಾಸ್ ಕೌಶಿಕ್- ಕುರುಕ್ಷೇತ್ರ ವಿವಿ- 6525 ಪಾಂಯ್ಟ್ಸ್
3. ಅನುಜ್ ಸಾಂಘ್‍ವಾನ್ - ಪಂಜಾಬಿ ವಿವಿ, ಪಟಿಯಾಲ- 6354 ಪಾಂಯ್ಟ್ಸ್
ಹಳೆಯ ದಾಖಲೆ
ಭರ್‍ತೀಂದ್ರ ಸಿಂಗ್ – ಕುರುಕ್ಷೇತ್ರ ವಿವಿ- 6877 ಪಾಂಯ್ಟ್ಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News