ಸಂವಿಧಾನ ದಿನ: ದೇಶದ ನಾಗರಿಕರಿಗೆ ಶುಭ ಹಾರೈಸಿದ ಪ್ರಧಾನಿ, ರಾಷ್ಟ್ರಪತಿ
ಹೊಸದಿಲ್ಲಿ, ನ. 26: ಸಂವಿಧಾನ ದಿನವಾದ ಸೋಮವಾರ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಕೋವಿಂದ್ ಹಾಗೂ ಇತರ ನಾಯಕರು ದೇಶದ ನಾಗರಿಕರಿಗೆ ಶುಭ ಹಾರೈಸಿದ್ದಾರೆ.
ಸಂರಚಿತ ವಿಧಾನ ಸಭೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಅತ್ಯಪೂರ್ವ ಕೊಡುಗೆ ನೀಡಿರುವುದನ್ನು ಹೆಮ್ಮೆಯೊಂದಿಗೆೆ ಸಂವಿಧಾನ ದಿನವಾದ ಇಂದು ನೆನಪಿಸಿಕೊಳ್ಳುತ್ತೇವೆ. ನಮ್ಮ ಸಂವಿಧಾನದ ಬಗ್ಗೆ ಹೆಮ್ಮೆ ಇದೆ ಹಾಗೂ ಸಂವಿಧಾನದ ವೌಲ್ಯಗಳನ್ನು ಎತ್ತಿಹಿಡಿಯುವ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಹೊಸದಿಲ್ಲಿ ವಿಜ್ಞಾನ ಭವನದಲ್ಲಿ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಎಲ್ಲ ನಾಗರಿಗರಿಗೆ ಶುಭ ಹಾರೈಸಿದರು ಹಾಗೂ ಬಿಐಎಂಎಸ್‌ಟಿಇಸಿ ದೇಶಗಳ ನ್ಯಾಯಾಂಗ ಸದಸ್ಯರನ್ನು ಸ್ವಾಗತಿಸಿದರು.
ಈ ಆಚರಣೆ ಭಾರತಕ್ಕೆ ಮಾತ್ರ ಮುಖ್ಯವಲ್ಲ. ಬದಲಾಗಿ ಇದಕ್ಕೆ ವಿಶ್ವಾತ್ಮಕ ವೌಲ್ಯ ಇದೆ. ಇದು ಪರಸ್ಪರ ಕಲಿಯುವಿಕೆ ಹಾಗೂ ಹಂಚಿಕೊಳ್ಳುವಿಕೆಗೆ ಅವಕಾಶ ನೀಡುತ್ತದೆ ಎಂದರು.