ಥ್ಯಾಂಕ್ ಯೂ ಪ್ರೆಸಿಡೆಂಟ್ ಟಿ: ತೈಲ ಬೆಲೆ ಇಳಿಕೆಗಾಗಿ ತನ್ನ ಬೆನ್ನು ತಾನೇ ತಟ್ಟಿಕೊಂಡ ಟ್ರಂಪ್

Update: 2018-11-26 17:12 GMT

ಫ್ಲೋರಿಡ, ನ. 26: ಇಳಿಯುತ್ತಿರುವ ತೈಲ ಬೆಲೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನನ್ನು ತಾನೇ ಅಭಿನಂದಿಸಿಕೊಂಡಿದ್ದಾರೆ. ಬಡ್ಡಿದರದ ವಿಷಯದಲ್ಲಿ ಅವರು ಫೆಡರಲ್ ರಿಸರ್ವನ್ನು ಟೀಕಿಸಿದರು. ಮಧ್ಯ ಅಮೆರಿಕದ ದೇಶಗಳು ಕೆಲವು ಜನರನ್ನು ಅಮೆರಿಕದಲ್ಲಿ ಬಿಸಾಡಲು ಪ್ರಯತ್ನಿಸುತ್ತಿವೆ ಎಂಬುದಾಗಿಯೂ ಅವರು ಹೇಳಿಕೊಂಡಿದ್ದಾರೆ.

ಈ ಎಲ್ಲ ಸಂಗತಿಗಳನ್ನು ಅವರು ರವಿವಾರ ಟ್ವಿಟರ್ ಸಂದೇಶಗಳ ಮೂಲಕ ಹೇಳಿದ್ದಾರೆ.

ಫ್ಲೋರಿಡದಲ್ಲಿ ಅವರು ಕಳೆಯುತ್ತಿರುವ ರಜೆ ರವಿವಾರ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಅವರು ನಿರಂತರ ಟ್ವೀಟ್‌ಗಳನ್ನು ಮಾಡಿದರು.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಕೆಗಾಗಿ ಅಧ್ಯಕ್ಷರು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡರು. ‘‘ಥ್ಯಾಂಕ್ ಯೂ ಪ್ರೆಸಿಡೆಂಟ್ ಟಿ’’ ಎಂಬುದಾಗಿ ಅವರು ಟ್ವೀಟ್ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News