ಗಡಿ ವಿವಾದಕ್ಕೆ ಪರಸ್ಪರ ಸಮ್ಮತಾರ್ಹ ಪರಿಹಾರಕ್ಕೆ ಒಲವು: ಚೀನಾ

Update: 2018-11-26 17:24 GMT

ಬೀಜಿಂಗ್, ನ. 26: ಈಗಷ್ಟೇ ಮುಕ್ತಾಯಗೊಂಡ ಭಾರತ ಮತ್ತು ಚೀನಾಗಳ ನಡುವಿನ 21ನೇ ಸುತ್ತಿನ ಗಡಿ ಮಾತುಕತೆಯಲ್ಲಿ, ದೀರ್ಘಕಾಲೀನ ಗಡಿ ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ ಉಭಯ ದೇಶಗಳು ‘ರಚನಾತ್ಮಕ, ಕಾರ್ಯಸಾಧ್ಯ ಮತ್ತು ಮುಂದಾಲೋಚನೆಯ’ ಸಲಹೆಗಳನ್ನು ನೀಡಿವೆ ಎಂದು ಚೀನಾ ವಿದೇಶ ಸಚಿವಾಲಯ ಸೋಮವಾರ ತಿಳಿಸಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ಸರಕಾರಿ ಸಲಹೆಗಾರ ವಾಂಗ್ ಯಿ ನೇತೃತ್ವದ ಉಭಯ ದೇಶಗಳ ತಂಡಗಳು ಸಿಚುವಾನ್ ಪ್ರಾಂತದ ಚೆಂಗ್ಡು ನಗರದ ಸಮೀಪದ ಡುಜಿಯಂಗ್ಯನ್‌ನಲ್ಲಿ ನವೆಂಬರ್ 24ರಂದು ಗಡಿ ಮಾತುಕತೆಗಳನ್ನು ನಡೆಸಿರುವುದನ್ನು ಸ್ಮರಿಸಬಹುದಾಗಿದೆ.

ಗಡಿ ಮಾತುಕತೆ ಪ್ರಕ್ರಿಯೆಯನ್ನು ಮುಂದುವರಿಸಲು ಉಭಯ ದೇಶಗಳ ಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆ ಎಂದು ಚೀನಾ ವಿದೇಶ ಸಚಿವಾಲಯ ಬಿಡುಗಡೆಗೊಳಿಸಿದ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News