ಅಫ್ಘಾನ್: ಪೊಲೀಸ್ ವಾಹನಗಳ ಮೇಲೆ ದಾಳಿ; 22 ಪೊಲೀಸರ ಸಾವು

Update: 2018-11-26 17:25 GMT

ಕಾಬೂಲ್, ನ. 26: ಪಶ್ಚಿಮ ಅಫ್ಘಾನಿಸ್ತಾನದ ಫರಾ ರಾಜ್ಯದಲ್ಲಿ ಪೊಲೀಸ್ ವಾಹನಗಳ ಸಾಲೊಂದರ ಮೇಲೆ ರವಿವಾರ ತಾಲಿಬಾನ್ ಭಯೋತ್ಪಾದಕರು ನಡೆಸಿದ ಹೊಂಚು ದಾಳಿಯಲ್ಲಿ ಕನಿಷ್ಠ 22 ಪೊಲೀಸರು ಹತರಾಗಿದ್ದಾರೆ ಹಾಗೂ ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ.

ದಾಳಿಯ ಹೊಣೆಯನ್ನು ತಾಲಿಬಾನ್ ವಹಿಸಿಕೊಂಡಿದೆ. 25 ಪೊಲೀಸರು ಮೃತಪಟ್ಟಿದ್ದಾರೆ ಎಂದು ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News