ಎಸ್ಡಿಪಿಐ ಆತೂರು ವಲಯದ ವತಿಯಿಂದ ಸದಸ್ಯತ್ವ ಅಭಿಯಾನ ಕಾರ್ಯಕ್ರಮ

Update: 2018-11-26 17:27 GMT

ಉಪ್ಪಿನಂಗಡಿ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆತೂರು ವಲಯದ ವತಿಯಿಂದ  ಆತೂರಿನ ಶಾಫಿ ಬಿಲ್ಡಿಂಗ್ ನ ಎದುರುಗಡೆ ನ.24ರಂದು  ಸದಸ್ಯತ್ವ ಅಭಿಯಾನ ಕಾರ್ಯಕ್ರಮವು ಆತೂರು ವಲಯ ಅಧ್ಯಕ್ಷರಾದ ಅಬ್ದುಲ್ ಖಾದರ್ ಬಿ.ಎಸ್  ರವರ ಅದ್ಯಕ್ಷತೆಯಲ್ಲಿ ಜರುಗಿತು. 

ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಆನಂದ್ ಮಿತ್ತಬೈಲು ರವರು ಪ್ರಾಸ್ತಾವಿಕವಾಗಿ ಮಾಡುತ್ತಾ ಎಸ್ಡಿಪಿಐ ಬಗ್ಗೆ ನಿಮಗೆ ತಿಳಿಯಬೇಕಾದರೆ ಮೊದಲು ಅಂಬೆಡ್ಕರ್, ಅಗಾ ಖಾನ್, ಟಿಪ್ಪು ಸುಲ್ತಾನ್ ರವರರ ಬಗ್ಗೆ ಅಧ್ಯಯನ ಮಾಡಬೇಕು ಎಂದರು. ಎಸ್ಡಿಪಿಐ ಎಂಬುದು ಶೋಷಿತರ, ಬಡವರ, ದಲಿತರ, ಧಮನಿತರ ಧ್ವನಿಯಾಗಿದೆ ಎಂದರು.

ನಂತರ ಮಾತನಾಡಿದ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆಯವರು  "ನಕಲಿ ಜಾತ್ಯಾತೀತ ಪಕ್ಷಗಳಿಂದ ಪ್ರಜಾಪ್ರಭುತ್ವವು ಇಂದು ಅಪಾಯದಲ್ಲಿದೆ. ವಿವಾದಿತ ಮಂದಿರ ನಿರ್ಮಾಣಕ್ಕೆ ಇಟ್ಟಿಗೆ ಮತ್ತು ಕರಸೇವಕರನ್ನು ನೀಡಲು ಜಾತ್ಯಾತೀತರೆಂದು ಕರೆಸಿಕೊಳ್ಳುವ ಪಕ್ಷಗಳು ಟೊಂಕ ಕಟ್ಟಿ ನಿಂತಿದೆ. ನಮಗೆ ಕೋಮು ಆಧಾರಿತ ದೇಶದ ಬದಲು ಹಿಂದು, ಮುಸ್ಲಿಮ್, ಕ್ರೈಸ್ತ, ಜೈನ, ಪಾರ್ಸಿ, ಬುದ್ಧರೆಲ್ಲರೂ ಪರಸ್ಪರ ಪ್ರೀತಿ, ಸಹಬಾಳ್ವೆ ನಂಬಿಕೆಯಿಂದ ಜೀವಿಸುವ ದೇಶ ಬೇಕು. ಈ ನಿಟ್ಟಿನಲ್ಲಿ ನೀವೆಲ್ಲರೂ  ಎಸ್ಡಿಪಿಐಯೊಂದಿಗೆ ಕೈ ಜೋಡಿಸಬೇಕು” ಎಂದರು.

ವೇದಿಕೆಯಲ್ಲಿ ಆತೂರು ವಲಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್  ಬೀಜತ್ತಳಿ, ಪುತ್ತೂರು ಕ್ಷೇತ್ರದ ಕೋಶಾಧಿಕಾರಿಗಳಾದ ಇಕ್ಬಾಲ್ ಕೆಂಪಿ, ಹಿರಿಯ ಮುಖಂಡರುಗಳಾದ ಅಬ್ದಲ್ ರಝಾಕ್ ಸೀಮ, ಉಪ್ಪಿನಂಗಡಿ  ವಲಯ ಸಮಿತಿ ಅದ್ಯಕ್ಷರಾದ ಅಬ್ದುಲ್ಲಾ ರವರು ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ಹಾಜಿ ಜಿ.ಎಂ. ಮುಹಮ್ಮದ್ ಹುಸೈನ್ ಸಿರಾಜ್ ರವರು ಸ್ವಾಗತಿಸಿದರು. ಇಸ್ಮಾಯಿಲ್ ಬೀಜತ್ತಳಿ ರವರು ನಿರೂಪಿಸಿ ಅಬ್ದುಲ್ ಖಾದರ್ ಬಿ.ಎಸ್. ರವರು ವಂದಿಸಿದರು.

ಸದಸ್ಯತ್ವ ಅಬಿಯಾನದ ಮೂಲಕ ರಾಮಕುಂಜ ಗ್ರಾಮದ ಅಂಬೇಡ್ಕರ್ ಕಾಲೋನಿಯ ಹಾಗೂ ಕೊಯಿಲ ಗ್ರಾಮಕ್ಕಳಪಟ್ಟ 15ಕ್ಕೂ ಹೆಚ್ಚು ದಲಿತರು ಸೇರಿ 70 ಹೊಸ ಕಾರ್ಯಕರ್ತರು ಸೇರ್ಪಡೆಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News