ಬಿಹಾರ: 70 ಅಡಿ ಎತ್ತರದ ಬುದ್ಧ ಪ್ರತಿಮೆ ಅನಾವರಣ

Update: 2018-11-26 17:36 GMT

 ಪಟ್ನಾ,ನ.26: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನಳಂದಾ ಜಿಲ್ಲೆಯ ರಾಜ್‌ಗಿರ್‌ನಲ್ಲಿ 70 ಅಡಿ ಎತ್ತರದ ಬುದ್ಧನ ವಿಗ್ರಹವನ್ನು ಸೋಮವಾರ ಅನಾವರಣಗೊಳಿಸಿದರು. ಇದು ದೇಶದ ಎರಡನೆ ಅತಿ ದೊಡ್ಡ ಬುದ್ಧನ ವಿಗ್ರಹವಾಗಿದೆ. ಬೌದ್ಧ ಶ್ಲೋಕಗಳ ಪಠಣದ ನಡುವೆ ಈ ಬೃಹತ್ ಬುದ್ಧನ ವಿಗ್ರಹವನ್ನು ಮಹಾಬೋಧಿ ಬುದ್ಧ ದೇವಾಲಯದ ಪ್ರಧಾನ ಸನ್ಯಾಸಿ ಭಾಂತೆ ಚಲಿಂಡಾ ನೆರನೇರಿಸಿದರು.

ಘೋರಾ ಕಟೋರಾ ಸರೋವರದ ಮಧ್ಯದಲ್ಲಿ 16 ಮೀಟರ್ ವ್ಯಾಪ್ತಿಯ ವೇದಿಕೆಯಲ್ಲಿ ಸ್ಥಾಪನೆಯಾಗಿರುವ ಈ ವಿಗ್ರಹವನ್ನು 45 ಸಾವಿರ ಕ್ಯೂಬಿಕ್ ಅಡಿ ವಿಸ್ತೀರ್ಣದ ಗುಲಾಬಿ ಬಣ್ಣದ ಮರಳುಗಲ್ಲಿನಲ್ಲಿ ನಿರ್ಮಿಸಲಾಗಿದೆ.

 ಘೋರಾ ಕಟೋರಾ ಸರೋವರದಲ್ಲಿ ದೋಣಿಯಲ್ಲಿ ಪ್ರಯಾಣಿಸಿದ ನಿತೀಶ್ ಕುಮಾರ್ ಅವರು ಬುದ್ಧನ ವಿಗ್ರಹದ ಸುತ್ತಲೂ ಪರಿಕ್ರಮಣಗೈದು ಪ್ರಾರ್ಥನೆಗಳನ್ನು ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News