×
Ad

ತೋಟ ಬೆಂಗ್ರೆ ಅತ್ಯಾಚಾರ ಪ್ರಕರಣ: ಆರೋಪಿಗಳ ಪರ ವಾದಿಸದಂತೆ ವಿದ್ಯಾರ್ಥಿಗಳಿಂದ ವಕೀಲರಿಗೆ ಮನವಿ

Update: 2018-11-28 12:31 IST

ಮಂಗಳೂರು, ನ.28: ತೋಟ ಬೆಂಗ್ರೆಯಲ್ಲಿ ಇತ್ತೀತಿಗೆ ಯುವತಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳ ಪರ ವಕಾಲತ್ತು ವಹಿಸದಂತೆ ದ.ಕ. ಜಿಲ್ಲೆಯ ಸರ್ವ ಕಾಲೇಜು ವಿದ್ಯಾರ್ಥಿ ಸಂಘವು ಜಿಲ್ಲಾ ವಕೀಲರ ಸಂಘಕ್ಕೆ ಮನವಿ ಮಾಡಿದೆ.

ಈ ಅತ್ಯಾಚಾರ ಪ್ರಕರಣ ಜಿಲ್ಲೆಗೆ ಕಳಂಕವನ್ನುಂಟು ಮಾಡಿದೆ. ಸಮಾಜಕ್ಕೆ ಮಾರಕವಾಗಿರುವ ಇಂತಹ ಆರೋಪಿಗಳ ಪರ ವಾದಿಸದೆ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಲು ಸಹಕರಿಸಬೇಕು. ಆರೋಪಿಗಳ ಪರ ವಾದಿಸದಂತೆ ವಕೀಲರಿಗೆ ಸಂಘ ಸೂಚಿಸಬೇಕು ಎಂದು ಒತ್ತಾಯಿಸಿರುವ ವಿದ್ಯಾರ್ಥಿ ಸಂಘ, ಆರೋಪಿಗಳ ಪರ ಯಾರಾದರೂ ವಕೀಲು ವಕಾಲತ್ತು ನಡೆಸಿದರೆ ಅವರ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.

ಮನವಿ ಸಲ್ಲಿಸಿದ ನಿಯೋಗದಲ್ಲಿ ಸಂಘದ ಪದಾಧಿಕಾರಿಗಳಾದ ಗುರುದತ್ ಮಲ್ಲಿ, ಇಬ್ರಾಹೀಂ ಬಾತೀಶ್, ಆ್ಯಸ್ಟಲ್ ಲೋಬೊ, ಅಶ್ವಿತ್ ಅಡಪ, ಅನ್ವಿತಾ ಶೆಟ್ಟಿ, ಪ್ರಿಯಾಂಕಾ ಶೆಟ್ಟಿ, ಶೈನಿ, ಮೇಘಾ, ನಿಹಾಲ್ ರೈ, ಸೋಹನ್ ಕಾರಂತ್, ಮಜೀದ್ ಕೊರೆಪಾಡಿ, ಸುಲೈಮಾನ್ ಶಾಫಿ, ಅಶ್ಫಾಕ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News