×
Ad

‘ನೀವು ಏಕಾಂಗಿಯಲ್ಲ’: ನಝೀರ್ ಅಹ್ಮದ್ ತಂದೆಯನ್ನು ಆಲಂಗಿಸಿದ ಸೇನಾಧಿಕಾರಿ; ಫೋಟೊ ವೈರಲ್

Update: 2018-11-28 14:14 IST

ಹೊಸದಿಲ್ಲಿ, ನ.28: ಕರ್ತವ್ಯದಲ್ಲಿದ್ದಾಗ ಹತರಾದ ಸಹೋದ್ಯೋಗಿಯೊಬ್ಬರ ದುಃಖತಪ್ತ ತಂದೆಗೆ ಸೇನಾಧಿಕಾರಿಯೊಬ್ಬರು ಸಾಂತ್ವನ ಹೇಳುತ್ತಿರುವ ಚಿತ್ರವೊಂದು ವೈರಲ್ ಆಗಿದೆಯಲ್ಲದೆ ಎಲ್ಲರನ್ನು ಭಾವಪರವಶರನ್ನಾಗಿಸಿದೆ. ಜಮ್ಮು ಕಾಶ್ಮೀರದ ಶೋಪಿಯನ್ ಜಿಲ್ಲೆಯಲ್ಲಿ ಸೇನಾ ಪಡೆಗಳು ಉಗ್ರರ ವಿರುದ್ಧ ನಡೆಸಿದ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದ ಲ್ಯಾನ್ಸ್ ನಾಯ್ಕ್ ನಝೀರ್ ಅಹ್ಮದ್ ವಾನಿ ಅವರ ತಂದೆಯನ್ನು ಅಧಿಕಾರಿ ಆಲಂಗಿಸಿ ಅವರನ್ನು ಸಮಾಧಾನ ಪಡಿಸುತ್ತಿರುವುದು ಚಿತ್ರದಲ್ಲಿ ಕಾಣಿಸುತ್ತದೆ.

ಎರಡು ಬಾರಿ ಸೇನಾ ಪದಕ ವಿಜೇತರಾಗಿದ್ದ ನಝೀರ್ ಟೆರಿಟೋರಿಯಲ್ ಸೇನೆಯಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದರೂ ಕಾರ್ಯಾಚರಣೆ ನಡೆದ ದಿನವಾದ ರವಿವಾರ 34 ರಾಷ್ಟ್ರೀಯ ರೈಫಲ್ಸ್ ಭಾಗವಾಗಿದ್ದರು. ಹಿಂದೆ ಉಗ್ರರ ಭಾಗವಾಗಿದ್ದರೂ ನಂತರ ಶರಣಾಗಿ ಸೇನೆ ಸೇರಿ ಕೀರ್ತಿ ಗಳಿಸಿದ್ದರು.

ನಝೀರ್ ತ್ಯಾಗವನ್ನು ಸ್ಮರಿಸಿ ಭಾರತೀಯ ಸೇನೆಯ ಎಡಿಜಿ ಪಿಐ ನಝೀರ್ ಅಂತ್ಯಕ್ರಿಯೆ ವೇಳೆ ತೆಗೆದ ಈ ಫೋಟೋ ಶೇರ್ ಮಾಡಿ ``ನೀವು ಒಬ್ಬಂಟಿಯಲ್ಲ'' ಎಂದು ಬರೆದಿದ್ದಾರೆ. ನಝೀರ್ ತಮ್ಮ ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News