ಗೂನಡ್ಕ: "ಸಾಂತ್ವನ" ಮನೆ ನಿರ್ಮಾಣಕ್ಕೆ ಸಹಾಯಹಸ್ತ
ಸುಳ್ಯ, ನ.28: ಗೂನಡ್ಕದ ಎಸ್.ವೈ.ಎಸ್. ಹಾಗೂ ಎಸ್ಸೆಸ್ಸೆಫ್ ಸಂಘಟನೆಯ ವತಿಯಿಂದ ಬಡ ಅನಾಥ ಕುಟುಂಬವೊಂದಕ್ಕೆ ನಿರ್ಮಾಣಗೊಳ್ಳುತ್ತಿರುವ "ಸಾಂತ್ವನ" ಮನೆಯ ಕಾಮಗಾರಿಯ ಸ್ಥಳಕ್ಕೆ ಎನ್.ಎಸ್.ಯು.ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಶೌವಾದ್ ಗೂನಡ್ಕ ಇಂದು ಭೇಟಿ ನೀಡಿ ತಮ್ಮ ಆತ್ಮೀಯರಿಂದ ಸ್ವೀಕರಿಸಿದ 21,000 ರೂ. ಮೊತ್ತದ ದೇಣಿಗೆಯನ್ನು ಮನೆ ನಿರ್ಮಾಣ ಸಮಿತಿಯ ಸದಸ್ಯ ಎ.ಟಿ.ಅಶ್ರಫ್ ಅವರಿಗೆ ಹಸ್ತಾಂತರಿಸಿದರು.
ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಮೊತ್ತವನ್ನು ಒದಗಿಸಿಕೊಡುವುದಾಗಿ ಶೌವಾದ್ ಗೂನಡ್ಕ ಮನೆ ನಿರ್ಮಾಣ ಸಮಿತಿಯವರಿಗೆ ತಿಳಿಸಿದರು.
ಈ ಸಂದರ್ಭ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ, ಅಲ್–ಅಮೀನ್ ವೆಲ್ಫೇರ್ ಅಸೋಸಿಯೇಶನ್ ನ ಉಪಾಧ್ಯಕ್ಷ ಸಿ.ಎಂ.ಅಬ್ದುಲ್ಲ, ಕಾರ್ಯದರ್ಶಿ ಜಿ.ಎಂ.ಅಬ್ದುಲ್ಲ, ಅಲ್–ಅಮೀನ್ ಎನ್.ಆರ್.ಐ. ಯುಎಇ ಘಟಕ, ಗೂನಡ್ಕ ಇದರ ನಿಕಟಪೂರ್ವ ಅಧ್ಯಕ್ಷ ಮುಸ್ತಫ ಪಾಂಡಿ ಹಾಗೂ ಸ್ಥಳೀಯರಾದ ಟಿ.ಬಿ.ಅಬ್ದುಲ್ಲ ಉಪಸ್ಥಿತರಿದ್ದರು.