ಡಾ.ನಯನತಾರಾ ಅರುಣಕುಮಾರ್‌ಗೆ ವೈದ್ಯಕೀಯ ಜೀವ ವಿಜ್ಞಾನ ಶ್ರೇಷ್ಠ ಸಂಶೋಧನಾ ಪುರಸ್ಕಾರ
Update: 2018-11-28 19:12 IST
ಉಡುಪಿ, ನ.28: ಕರ್ನಾಟಕ ಸರಕಾರವು ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿ ಸ್ಥಾಪಿಸಿರುವ ಭಾರತರತ್ನ ಪ್ರೊ. ಸಿ. ಎನ್. ಆರ್. ರಾವ್ ಅಧ್ಯಕ್ಷತೆಯ ವಿಷನ್ ಗ್ರೂಪ್, ಪ್ರತಿ ವರ್ಷ ವಿಜ್ಞಾನದ ವಿವಿಧ ಕ್ಷೇತ್ರಗಳ ಉನ್ನತ ಸಂಶೋಧನೆಯನ್ನು ಗುರುತಿಸಿ ನೀಡುವ ಶ್ರೇಷ್ಠ ಸಂಶೋಧನಾ ಪ್ರಶಸ್ತಿಯನ್ನು ವೈದ್ಯಕೀಯ ಜೀವ ವಿಜ್ಞಾನ ವಿಭಾಗದಲ್ಲಿ ಡಾ. ನಯನತಾರಾ ಅರುಣಕುಮಾರ್ ಇವರಿಗೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ವಿಶೇಷ ಸಮಾರಂಭದಲ್ಲಿ ಪ್ರೊ. ಸಿ.ಎನ್. ಆರ್.ರಾವ್ ಅವರು ಮಂಗಳೂರಿನ ಡಾ.ನಯನತಾರಾ ಅರುಣಕುಮಾರ್ ಇವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಡಾ.ನಯನತಾರಾ ಅರುಣಕುಮಾರ್ ಇವರು ಮಣಿಪಾಲದ ಮಾಹೆಅಧೀನಕ್ಕೊಳಪಟ್ಟ ಮಂಗಳೂರಿನ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನ ಫಿಸಿಯೋಲಜಿ ವಿಭಾಗದಲ್ಲಿ ಸಹ ಪ್ರಾ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.