×
Ad

ಡಿ. 1, 2ರಂದು ಸರಕಾರಿ ನೌಕರರ ಕ್ರೀಡಾಕೂಟ-ಸಾಂಸ್ಕೃತಿಕ ಸ್ಪರ್ಧೆ

Update: 2018-11-28 19:53 IST

ಬಂಟ್ವಾಳ, ನ. 28: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಬಂಟ್ವಾಳ ತಾಲೂಕು ಶಾಖೆ ಇದರ ವತಿಯಿಂದ ಬಂಟ್ವಾಳ ತಾಲೂಕು ಸರಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ 2018-19 ಕಾರ್ಯಕ್ರಮ ಡಿ.1 ಮತ್ತು 2ರಂದು ಬಂಟ್ವಾಳ ಎಸ್‍ವಿಎಸ್ ದೇವಳದ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಉಮಾನಾಥ ರೈ ಮೇರಾವು ಪ್ರತಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸ್ಪರ್ಧೆ: 30 ವರ್ಷದವರಿಗೆ 100 ಮೀ.ಓಟ, 400 ಮೀ.ಓಟ, ಉದ್ದ ಜಿಗಿತ, ಗುಂಡು ಎಸೆತ, 31 ವರ್ಷದಿಂದ 40ರವರೆಗೆ 100 ಮೀ.ಓಟ, 200 ಮೀ.ಓಟ, ಉದ್ದ ಜಿಗಿತ, ಗುಂಡು ಎಸೆತ, 41 ವರ್ಷದಿಂದ 50 ವರ್ಷದವರೆಗೆ 100 ಮೀ.ಓಟ, 200 ಮೀ.ಓಟ, ಉದ್ದ ಜಿಗಿತ, ಗುಂಡು ಎಸೆತ, 51 ವರ್ಷದಿಂದ 60ರವರೆಗೆ 100 ಮೀ.ಓಟ, ಗುಂಡು ಎಸೆತ, ಚೆಂಡು ಎಸೆತ, ನಡಿಗೆ ಸ್ಪರ್ಧೆ, ಗುಂಪಾಟಗಳು ಪುರುಷರಿಗೆ ವಾಲಿಬಾಲ್, ಕಬಡ್ಡಿ, ಹಗ್ಗಜಗ್ಗಾಟ, ಮಹಿಳೆಯರಿಗೆ ವಾಲಿಬಾಲ್, ತ್ರೋಬಾಲ್, ಹಗ್ಗಜಗ್ಗಾಟ, ಸಾಂಸ್ಕೃತಿಕ ಸ್ಪರ್ಧೆ ಗಳು ವೈಯಕ್ತಿಕ ಭಾವಗೀತೆ, ಜಾನಪದ ಗೀತೆ, ಆಶುಭಾಷಣ, ರಸಪ್ರಶ್ನೆ, ಪಿಕ್ ಆಂಡ್ ಆಕ್ಟ್, ಮನೋರಂಜನಾ ಆಟಗಳು, 60 ವರ್ಷ ಮೇಲ್ಪಟ್ಟ ನಿವ್ರತ್ತ ಸರಕಾರಿ ನೌಕರರಿಗೆ ಸ್ಪರ್ಧೆಗಳು 200 ಮೀ.ನಡಿಗೆ, 50 ಮೀ.ಓಟ, ಗುಂಡು ಎಸೆತ, ಬಾಲ್ ಎಸೆತ ಹಾಗೂ ಡಿ. 2ರಂದು ಬೆಳಿಗ್ಗೆ ಕ್ರಿಕೆಟ್ ಪಂದ್ಯಾಟ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News