ನ.30ರಿಂದ ಸಚಿವೆ ಜಯಮಾಲಾ ಉಡುಪಿ ಜಿಲ್ಲಾ ಪ್ರವಾಸ
ಉಡುಪಿ, ನ.28: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಅವರು ನ.30 ಮತ್ತು ಡಿ.1ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ನ.30ರಂದು ಬೆಳಗ್ಗೆ 10 ಕ್ಕೆ ಉಡುಪಿಗೆ ಆಗಮಿಸುವ ಅವರು, ಆದಿ ಉಡುಪಿ ಸಂತೆ ಮಾರ್ಕೆಟ್ ಬಳಿ ಜಿಲ್ಲಾ ರಂಗ ಮಂದಿರ ಮತ್ತು ರಂಗಾಯಣ ಕಟ್ಟಡದ ಶಿಲಾನ್ಯಾಸ ನೆರವೇರಿಸುವರು. 11:30ಕ್ಕೆ ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ, ಅಪರಾಹ್ನ 2:30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಳುಪೋತ್ಸವ ಮತ್ತು ಜಾನಪದ ಜಾತ್ರೆ ಕುರಿತು ಪೂರ್ವಭಾವಿ ಸಭೆ, ಸಂಜೆ 4 ಕ್ಕೆ ಉಡುಪಿ ತಾಪಂ ಸಭಾಂಗಣದಲ್ಲಿ ಉಡುಪಿ ಮತ್ತು ಕಾಪು ತಾಲೂಕಿಗೆ ಸಂಬಂಧಿಸಿದಂತೆ ಹಕ್ಕುಪತ್ರಗಳ ವಿತರಣೆ. ಬಳಿಕ ಉಡುಪಿಯಲ್ಲಿ ವಾಸ್ತವ್ಯ.
ಡಿ.1ರಂದು ಬೆಳಗ್ಗೆ 10 ಕ್ಕೆ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಕುರಿತು ಸಭೆ, 11:30ಕ್ಕೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ, ಅಪರಾಹ್ನ 12:30ಕ್ಕೆ ಜಿಲ್ಲಾ ಖನಿಜ ಪ್ರತಿಷ್ಟಾನ ನಿಧಿ ಬಳಕೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಬಳಿಕ ಮಂಗಳೂರಿಗೆ ತೆರಳುವರು.