ಕಿಶ್ತ್‌ವಾರ್ ಹತ್ಯೆ ಪ್ರಕರಣ: ತನಿಖೆ ಎನ್‌ಐಎಗೆ ಹಸ್ತಾಂತರ

Update: 2018-11-28 16:33 GMT

ಜಮ್ಮು, ನ.28: ಕಿಶ್ತ್‌ವಾರ್‌ನಲ್ಲಿ ನಡೆದಿದ್ದ ಹಿರಿಯ ಬಿಜೆಪಿ ಮುಖಂಡ ಹಾಗೂ ಅವರ ಸಹೋದರನ ಹತ್ಯೆಯ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಮಂಡಳಿ(ಎನ್‌ಐಎ)ಗೆ ಹಸ್ತಾಂತರಿಸಿರುವುದಾಗಿ ಜಮ್ಮು-ಕಾಶ್ಮೀರ ಸರಕಾರ ತಿಳಿಸಿದೆ.

ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಅನಿಲ್ ಪಾರಿಹರ್ ಹಾಗೂ ಅವರ ಸಹೋದರ ಅಜಿತ್ ಪಾರಿಹರ್‌ರನ್ನು ಈ ತಿಂಗಳ ಆರಂಭದಲ್ಲಿ ಅಪರಿಚಿತ ಬಂದೂಕುಧಾರಿಗಳು ಕಿಶ್ತ್‌ವಾರ್ ನಗರದಲ್ಲಿ ಗುಂಡಿಟ್ಟು ಹತ್ಯೆ ಮಾಡಿದ್ದರು. ಇದೊಂದು ಭಯೋತ್ಪಾದಕ ಕೃತ್ಯವಾಗಿದೆ ಎಂದು ಹೇಳಿದ್ದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಈ ಘಟನೆಯಲ್ಲಿ ಶಾಮೀಲಾಗಿರುವವರನ್ನು ಗುರುತಿಸಲಾಗಿದೆ ಎಂದಿದ್ದರು.

ಬಳಿಕ ಹಲವು ಶಂಕಿತರನ್ನು ಪೊಲೀಸರು ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದರು. ಇದೀಗ ಈ ಪ್ರಕರಣದ ತನಿಖೆಯನ್ನು ಎನ್‌ಐಗೆ ವಹಿಸಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿ ದೃಢಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News