ಆಧಾರ್ ಬಯೊಮೆಟ್ರಿಕ್‌ಗಳನ್ನು ಲಾಕ್ ಮಾಡಲು ಮಾತ್ರ ಸಾಧ್ಯ: ಯುಐಡಿಎಐ ಹೇಳಿಕೆ

Update: 2018-11-28 16:52 GMT

ಹೊಸದಿಲ್ಲಿ,ನ.28: ಆಧಾರ್ ಸಂಖ್ಯೆ ಹೊಂದಿರುವವರು ಕೇವಲ ತಮ್ಮ ಬಯೊಮೆಟ್ರಿಕ್‌ಗಳನ್ನು ಶಾಶ್ವತವಾಗಿ ಲಾಕ್ ಮಾಡಬಹುದು,ಆದರೆ ಸರ್ವೋಚ್ಚ ನ್ಯಾಯಾಲಯವು ಸೂಚಿಸಿರುವಂತೆ ಯೋಜನೆಯಿಂದ ಹೊರಗೆ ಬರಲು ಸಾಧ್ಯವಾಗದಿರಬಹುದು ಎಂದು ಆರ್‌ಟಿಐ ಅರ್ಜಿಯೊಂದಕ್ಕೆ ನೀಡಿರುವ ಉತ್ತರದಲ್ಲಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ವು ತಿಳಿಸಿದೆ.

ಕಳೆದ ತಿಂಗಳು ಆರ್‌ಟಿಐ ಕಾಯ್ದೆಯಡಿ ಅರ್ಜಿಯನ್ನು ಸಲ್ಲಿಸಿದ್ದ ಗುಜರಾತ್ ನಿವಾಸಿ ಮಹೆದಿ ಹಸನ್ ಅಲಿಯಾರಝಾಕ್ ಪಟೇಲ್ ಅವರು ಈ ಸಂಬಂಧ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಪ್ರಸ್ತಾಪಿಸಿ,ತಾನು ಯೋಜನೆಯಿಂದ ಹೇಗೆ ಹೊರಬರಬಹುದು ಎಂದು ಕೇಳಿದ್ದರಲ್ಲದೆ ಇದಕ್ಕಾಗಿ ವಿವರವಾದ ವಿಧಿವಿಧಾನಗಳನ್ನು ತಿಳಿಯಲು ಬಯಸಿದ್ದರು.

ಆಧಾರ್ ಹೊಂದಿರುವವರು ತಮ್ಮ ಬಯೊಮೆಟ್ರಿಕ್‌ಗಳನ್ನು ಲಾಕ್ ಮಾಡುವಂತೆ ಪ್ರಾಧಿಕಾರಕ್ಕೆ ಸೂಚಿಸಬಹುದು ಅಥವಾ ತಾವೇ ನೇರವಾಗಿ ಆಧಾರ್ ಜಾಲತಾಣಕ್ಕೆ ಭೇಟಿ ನೀಡಬಹುದು ಎಂದು ಪ್ರಾಧಿಕಾರವು ಹೇಳಿದೆ.

ಎರಡು ವರ್ಷಗಳ ಹಿಂದೆ ಆಧಾರ್ ಕಾಯ್ದೆಯ ಅನುಷ್ಠಾನಕ್ಕೆ ಮುನ್ನ ನೋಂದಾವಣೆ ಮಾಡಿಕೊಂಡವರು ಆಧಾರ್ ಯೋಜನೆಯಿಂದ ಹೊರಬರಬಹುದು ಎಂದು ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠವು ತನ್ನ 2018,ಸೆ.26ರ ತೀರ್ಪಿನಲ್ಲಿ ತಿಳಿಸಿತ್ತು.

 ಯುಐಡಿಎಐ ಉತ್ತರವು ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿಲ್ಲ ಎಂದು ಅರ್ಜಿದಾರರಿಗೆ ಅರ್ಜಿ ಸಲ್ಲಿಸಲು ನೆರವಾಗಿದ್ದ ದಿಲ್ಲಿಯ ನ್ಯಾಯವಾದಿ ಪ್ರಸನ್ನ ಎಸ್. ಅವರು ಹೇಳಿದರು.

 “ಯೋಜನೆಯಿಂದ ಹೊರಬರಲು ಸಾಧ್ಯವಾಗದೇ ಇರಬಹುದು”

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News