ಎಸ್‌ಬಿಐ ಠೇವಣಿ ಮೇಲಿನ ಬಡ್ಡಿದರ ಹೆಚ್ಚಳ

Update: 2018-11-28 16:56 GMT

ಹೊಸದಿಲ್ಲಿ, ನ.28: ದೇಶದ ಬೃಹತ್ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಆಯ್ದ ಪಕ್ವತಾ ಅವಧಿಯ ಫಿಕ್ಸೆಡ್ ಡಿಪಾಸಿಟ್ ಮೇಲಿನ ಬಡ್ಡಿದರವನ್ನು ನವೆಂಬರ್ 28ರಿಂದಲೇ ಅನ್ವಯಿಸುವಂತೆ ಹೆಚ್ಚಿಸಿದೆ ಎಂದು ಎಸ್‌ಬಿಐ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

1 ಕೋಟಿ ರೂ.ಗಿಂತ ಕೆಳಗಿನ ಸ್ಥಿರ ಠೇವಣಿ ಮೇಲಿನ ಬಡ್ಡಿದರ ಹೆಚ್ಚಳ 0.05ಯಿಂದ 0.10ರಷ್ಟು ಅಥವಾ 5ರಿಂದ 10 ಮೂಲ ಅಂಕಗಳಷ್ಟು ಆಗಿದೆ. ಒಂದು ಮೂಲ ಅಂಕ ಎಂಬುದು ಶೇ. 0.01ಕ್ಕೆ ಸಮವಾಗಿದೆ. ಎಸ್‌ಬಿಐ ಉದ್ಯೋಗಿಗಳಿಗೆ ಹಾಗೂ ಎಸ್‌ಬಿಐ ಪೆನ್ಷನ್ ಪಡೆಯುವವರ ಠೇವಣಿಗೆ ನೀಡುವ ಬಡ್ಡಿದರ ಅನ್ವಯಿಸುವ ದರಕ್ಕಿಂತ ಶೇ.1ರಷ್ಟು ಹೆಚ್ಚಾಗಿದೆ. ಹಿರಿಯ ನಾಗರಿಕರಿಗೆ ಹಾಗೂ ಎಸ್‌ಬಿಐ ಪೆನ್ಶನ್ ಪಡೆಯುವ 60 ವರ್ಷ ಮೀರಿದವರಿಗೆ ಇತರ ನಿವಾಸಿ ಭಾರತೀಯ ಹಿರಿಯ ನಾಗರಿಕರಿಗೆ ನೀಡುವ ಬಡ್ಡಿಗಿಂತ ಶೇ.0.50ರಷ್ಟು ಅಧಿಕ ಬಡ್ಡಿ ನೀಡಲಾಗುವುದು. ಎಸ್‌ಬಿಐ ಪೆನ್ಶನ್ ಪಡೆಯುವ ನಿವಾಸಿ ಭಾರತೀಯ ಹಿರಿಯ ನಾಗರಿಕರು- ಉದ್ಯೋಗಿಗಳಿಗೆ ನೀಡುವ ಶೇ.1ರಷ್ಟು ಹಾಗೂ ನಿವಾಸಿ ಭಾರತೀಯ ಹಿರಿಯ ನಾಗರಿಕರಿಗೆ ನೀಡುವ ಶೇ.0.50ರಷ್ಟು ಹೆಚ್ಚುವರಿ ಪ್ರಯೋಜನ ಪಡೆಯುತ್ತಾರೆ. ನವೆಂಬರ್ 6ರಂದು ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ನವೆಂಬರ್ 15ರಂದು ಐಸಿಐಸಿಐ ಬ್ಯಾಂಕ್ ಫಿಕ್ಸೆಡ್ ಡಿಪಾಸಿಟ್ ಬಡ್ಡಿದರವನ್ನು ಪರಿಷ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News