×
Ad

ಪ್ರವಾದಿ ಪೈಗಂಬರ್ ಜಗತ್ತಿನ ಶ್ರೇಷ್ಠ ಸಮಾಜ ಸುಧಾರಕ : ಡಾ. ಪೀಟರ್ ವಿಲ್ಸನ್

Update: 2018-11-29 16:26 IST

ಪುತ್ತೂರು, ನ. 29: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ನಡೆಸಿದ ವಿಶ್ವದ ಮಹಾನ್ ನಾಯಕರಾಗಿದ್ದು ಅಸಮಾನತೆ, ಗುಲಾಮಗಿರಿ ವಿರುದ್ಧ ಸಮರ ಸಾರಿದ ಜಗತ್ತಿನ ಸರ್ವಶ್ರೇಷ್ಠ ಸಮಾಜ ಸುಧಾಕರು ಎಂದು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಹೇಳಿದರು.

ಅವರು ಜಮಾಅತೆ ಇಸ್ಲಾಮಿ ಹಿಂದ್ ಪುತ್ತೂರು ವತಿಯಿಂದ ಪುತ್ತೂರು ಟೌನ್‍ಬ್ಯಾಂಕ್ ಸಭಾಂಗಣದಲ್ಲಿ ನಡೆದ 'ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ' ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸದ್ಭಾವನಾ ವೇದಿಕೆ ಕರ್ನಾಟಕ ಇದರ ಅಧ್ಯಕ್ಷ ಅಕ್ಬರ್ ಅಲಿ ಉಡುಪಿ ಮಾತನಾಡಿ ಪ್ರವಾದಿ ಸಂದೇಶಗಳು ಸಾರ್ವಕಾಲಿಕವಾಗಿದ್ದು ಪ್ರವಾದಿಯಾಗಲೀ, ಇಸ್ಲಾಂ ಧರ್ಮವಾಗಲೀ ಯಾರ ಮೇಲೆಯೂ ಧರ್ಮದ ಬಗ್ಗೆ ಒತ್ತಡ ಹೇರಿಲ್ಲ, ಬಲಾತ್ಕಾರವೂ ಮಾಡಿಲ್ಲ ಎಂದರು. 

ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕ ಅಮೀನ್ ಅಹ್ಸನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಿಯಾಝ್ ಹಾರೂನ್ ಪ್ರಸ್ತಾವನೆಗೈದು, ಮುಶಬ್ ಮುಹಮ್ಮದ್ ಖಿರಾಅತ್ ಪಠಿಸಿದರು. ಜಲೀಲ್ ಮುಕ್ರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ಏನು ಸಂದೇಶ ಕೊಡುತ್ತಿದ್ದರೋ ಅದನ್ನು ಸ್ವತಃ ಅವರು ಅಳವಡಿಸಿಕೊಂಡು ಇನ್ನೊಬ್ಬರಿಗೆ ಉಪದೇಶಿಸುತ್ತಿ ದ್ದರು, ಅನಾಥ ಮಕ್ಕಳ ಸಂರಕ್ಷಣೆಗೆ ಪ್ರಾಶಸ್ತ್ಯ ಕೊಟ್ಟಿದ್ದ ಅವರು ಮಹಿಳೆಯರ ಶಿಕ್ಷಣದ ಬಗ್ಗೆ ಹಾಗೂ ಅವರ ಹಕ್ಕುಗಳ ಬಗ್ಗೆ ಪ್ರತಿಪಾದನೆ ಮಾಡಿದ್ದರು, ಮದ್ಯಪಾನವನ್ನು ಎಲ್ಲ ಕೆಡುಕುಗಳ `ತಾಯಿ' ಎಂದು ಘೋಷಿಸಿದ್ದ ಅವರು ಅದನ್ನು ನಿಷೇಧಿಸಿದ್ದರು, ಸ್ವಾಮಿ ವಿವೇಕಾನಂದ, ಜವಹಾರ್‍ಲಾಲ್ ನೆಹರೂ ಒಳಗೊಂಡಂತೆ ವಿಶ್ವದ ಮಹಾನ್ ವ್ಯಕ್ತಿಗಳೂ ಕೂಡಾ ಪ್ರವಾದಿ ಪೈಗಂಬರ್ ಅವರ ಸಂದೇಶಗಳನ್ನು ಮೆಚ್ಚಿಕೊಂಡಿದ್ದರು, ಪ್ರವಾದಿಯವರ ಸಂದೇಶಗಳು ದಿನನಿತ್ಯ ಎಲ್ಲರ ಬದುಕಿನಲ್ಲಿ ಅನುಕರಣೆಯಾಗಬೇಕಾಗಿರುವುದು ಕಾಲದ ಅಗತ್ಯತೆಯಾಗಿದೆ ಎಂದು ಹೇಳಿದರು.

ಸಾಹಿತಿ ಅರವಿಂದ ಚೊಕ್ಕಾಡಿ ಮಾತನಾಡಿ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಮೂಲ ತತ್ವ ಮತ್ತು ಉದ್ದೇಶ ಶಾಂತಿ ಮತ್ತು ನ್ಯಾಯ ಪರಿಪಾಲನೆ ಆಗಿತ್ತು, ಅವರು ಮನುಕುಲದ ಅಭ್ಯುದಯಕ್ಕೆ ನೀಡಿರುವ ಮಹತ್ವ ಮತ್ತು ಸಂದೇಶಗಳು ವರ್ಣಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಪ್ರವಾದಿ ಮುಹಮ್ಮದ್ ಪೈಗಂಬರ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದು ಚೀನಾ ದೇಶದಲ್ಲಿ ಹೋಗಿಯಾದರೂ ಶಿಕ್ಷಣವನ್ನು ಪಡೆದುಕೊಳ್ಳಿ ಎಂದು ಆಗಿನ ಕಾಲದಲ್ಲೇ ಅವರು ನೀಡಿರುವ ಸಂದೇಶವನ್ನು ಗಮನಿಸುವಾಗ ಶಿಕ್ಷಣದ ಬಗ್ಗೆ ಅವರೆಷ್ಟು ಮಹತ್ವ ಹೊಂದಿದ್ದರು ಎಂಬುವುದನ್ನು ಅಂದಾಜಿಸಬಹುದಾಗಿದೆ ಎಂದು ಹೇಳಿದರು.
ಜಿಹಾದ್ ಎಂಬ ಪದಕ್ಕೆ ಬಹಳ ಉತ್ತಮವಾದ ಅರ್ಥವಿದೆ. ಜಿಹಾದ್ ಎಂದರೆ ನಮ್ಮೊಳಗಿನ ಕೆಡುಕುಗಳ ವಿರುದ್ಧ ನಿರಂತರ ಯುದ್ಧ ಸಾರಬೇಕು ಎಂಬುವುದು ಇಸ್ಲಾಂ ಧರ್ಮದ ಆದೇಶ. ಆದರೆ ಇಂದು ಜಿಹಾದ್ ಎಂಬ ಪದಕ್ಕೆ ಯಾರ್ಯಾರೋ ಏನೇನೋ ಅರ್ಥ ಕಲ್ಪಿಸಿದ ಪರಿಣಾಮ ಅದು ಅಪಾರ್ಥಕ್ಕೀಡಾಗಿದೆ. ಧರ್ಮಗಳು ಪರಸ್ಪರ ಹೊಂದಾಣಿಕೆಯಿಂದ ಸಾಗಬೇಕಾದರೆ ಹಿಂದೂ ಧರ್ಮದ ಪರವಾಗಿ ಮುಸ್ಲಿಮರು ಮತ್ತು ಇಸ್ಲಾಂ ಧರ್ಮದ ಪರವಾಗಿ ಹಿಂದೂಗಳು ಮಾತನಾಡಬೇಕು ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಸದ್ಭಾವನಾ ವೇದಿಕೆ ಕರ್ನಾಟಕ ಇದರ ಅಧ್ಯಕ್ಷ ಅಕ್ಬರ್ ಅಲಿ ಉಡುಪಿ ಮಾತನಾಡಿ ಪ್ರವಾದಿಯವರ ಸಂದೇಶಗಳು ಸಾರ್ವಕಾಲಿಕವಾಗಿದ್ದು ಪ್ರವಾದಿಯಾಗಲೀ, ಇಸ್ಲಾಂ ಧರ್ಮವಾಗಲೀ ಯಾರ ಮೇಲೆಯೂ ಧರ್ಮದ ಬಗ್ಗೆ ಒತ್ತಡ ಹೇರಿಲ್ಲ, ಬಲಾತ್ಕಾರವೂ ಮಾಡಿಲ್ಲ ಎಂದು ಹೇಳಿದರು 

ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾ ಸಂಚಾಲಕ ಅಮೀನ್ ಅಹ್ಸನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಿಯಾಝ್ ಹಾರೂನ್ ಪ್ರಸ್ತಾವನೆಗೈದರು. ಮುಶಬ್ ಮುಹಮ್ಮದ್ ಖಿರಾಅತ್ ಪಠಿಸಿದರು. ಜಲೀಲ್ ಮುಕ್ರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News