×
Ad

ದ.ಕ.ಜಿಲ್ಲಾ ಕಾಂಗ್ರೆಸ್: ಕ್ಷೇತ್ರ ಉಸ್ತುವಾರಿ/ಬ್ಲಾಕ್ ವೀಕ್ಷಕರ ನೇಮಕ

Update: 2018-11-29 22:55 IST

ಮಂಗಳೂರು, ನ. 29: ಮುಂದಿನ ಲೋಕಸಭಾ ಚುನಾವಣೆ ಎದುರಿಸಲು ಮತ್ತು ತಳಮಟ್ಟದಲ್ಲಿ ಪಕ್ಷವನ್ನು ಇನ್ನಷ್ಟು ಸಂಘಟನೆಗೊಳಿಸಲು ಎಐಸಿಸಿ ಮತ್ತು ಕೆಪಿಸಿಸಿ ನಿರ್ದೇಶನದಂತೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ದ.ಕ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಉಸ್ತುವಾರಿಯಾಗಿ ಮತ್ತು ಬ್ಲಾಕ್ ವ್ಯಾಪ್ತಿಗೆ ವೀಕ್ಷಕರನ್ನಾಗಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಾರ್ ನೇಮಿಸಿ ಆದೇಶ ಹೊರಡಿಸಿದ್ದಾರೆ.

ವಿಧಾನಸಭಾ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ಬೆಳ್ತಂಗಡಿಗೆ ವೆಂಕಪ್ಪಗೌಡ, ಮೂಡುಬಿದಿರೆಗೆ ಪ್ರಸಾದ್‌ರಾಜ್ ಕಾಂಚನ್, ಮಂಗಳೂರು ಉತ್ತರಕ್ಕೆ ಅಬೂಬಕರ್ ಕುದ್ರೋಳಿ, ಮಂಗಳೂರು ದಕ್ಷಿಣಕ್ಕೆ ಎಂ.ಎಸ್. ಮುಹಮ್ಮದ್, ಮಂಗಳೂರಿಗೆ ಕೆ.ಕೆ. ಶಾಹುಲ್ ಹಮೀದ್, ಬಂಟ್ವಾಳಕ್ಕೆ ಮಮತಾ ಗಟ್ಟಿ, ಪುತ್ತೂರಿಗೆ ಧನಂಜಯ ಅಡ್ಪಂಗಾಯ, ಸುಳ್ಯಕ್ಕೆ ಲೋಕೇಶ್ವರಿ ವಿನಯಚಂದ್ರ ಅವರನ್ನು ನೇಮಕ ಮಾಡಲಾಗಿದೆ.

ಬ್ಲಾಕ್‌ಗೆ ವೀಕ್ಷಕರಾಗಿ ಬೆಳ್ತಂಗಡಿ ನಗರಕ್ಕೆ ವಿಜಯ್ ಕುಮಾರ್ ರೈ ಮತ್ತು ಸೈಮನ್ ಕಡಬ, ಬೆಳ್ತಂಗಡಿ ಗ್ರಾಮಾಂತರಕ್ಕೆ ಎಚ್. ಮುಹಮ್ಮದ್ ಅಲಿ ಮತ್ತು ಪಿ.ಎಸ್. ಗಂಗಾಧರ್, ಮೂಡುಬಿದಿರೆಗೆ ಫಝಲ್ ರಹೀಂ ಮತ್ತು ಚಂದ್ರಶೇಖರ್ ಪೂಜಾರಿ, ಮುಲ್ಕಿಗೆ ಸತೀಶ್ ಕೆಡೆಂಜಿ ಮತ್ತು ಬಿಲಾಲ್ ಮೊಯ್ದಿನ್, ಸುರತ್ಕಲ್‌ಗೆ ಟಿ.ಕೆ ಸುಧೀರ್ ಮತ್ತು ಇಲ್ಯಾಸ್ ಕಡಬ, ಗುರುಪುರಕ್ಕೆ ಮರಿಯಮ್ಮ ಥೋಮಸ್ ಮತ್ತು ಅಶೋಕ್ ಶೆಟ್ಟಿ ವಿಟ್ಲ, ಮಂಗಳೂರು ನಗರಕ್ಕೆ ಪದ್ಮನಾಭ ನರಿಂಗಾನ ಮತ್ತು ಉಮ್ಮರ್ ಫಾರೂಕ್, ಮಂಗಳೂರು ದಕ್ಷಿಣಕ್ಕೆ ಬಿ.ಕೆ ಇದಿನಬ್ಬ ಮತ್ತು ರಾಜೇಶ್ ಕುಮಾರ್ ಬಾಳೆಕಲ್ಲು, ಉಳ್ಳಾಲಕ್ಕೆ ಹಿಲ್ಡಾ ಆಳ್ವ ಮತ್ತು ಬಿ.ಎಂ. ಭಾರತಿ, ಮುಡಿಪುಗೆ ವಾಸು ಪೂಜಾರಿ ಮತ್ತು ಸಿ.ಎಂ. ಮುಸ್ತಫಾ, ಬಂಟ್ವಾಳಕ್ಕೆ ಜಗದೀಶ್ ಡಿ ಮತ್ತು ಆರೀಫ್ ಬಾವ, ಪಾಣೆಮಂಗಳೂರುಗೆ ಅಬ್ದುರ್ರವೂಫ್ ಮತ್ತು ಸುಮಂತ್ ರಾವ್, ಪುತ್ತೂರುಗೆ ಶುಭೋದಯ ಆಳ್ವ ಮತ್ತು ಎ.ಸಿ. ಮ್ಯಾಥ್ಯೂ, ವಿಟ್ಲಕ್ಕೆ ಉಮ್ಮರ್ ಫಜೀರ್ ಮತ್ತು ಜನಾರ್ದನ್ ಚೆಂಡ್ತಿಮಾರ್, ಸುಳ್ಯಕ್ಕೆ ಪ್ರವೀಣ್ ಚಂದ್ರ ಆಳ್ವ ವಿಟ್ಲ ಮತ್ತು ಮುರಳೀಧರ್ ಶೆಟ್ಟಿ, ಕಡಬಕ್ಕೆ ಮಹೇಶ್ ರೈ ಕಾವು ಮತ್ತು ಉಲ್ಲಾಸ್ ಕೋಟ್ಯಾನ್ ಅವರನ್ನು ನೇಮಿಸಿ ಆದೇಶಿಶಲಾಗಿದೆ ಎಂದು ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News