ಡಿ.2: ಸಜಿಪ ಉಸ್ತಾದ್ ಆಂಡ್ ನೇರ್ಚೆ, ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮ
Update: 2018-11-30 17:09 IST
ಡಿ.2: ಸಜಿಪ ಉಸ್ತಾದ್ ಆಂಡ್ ನೇರ್ಚೆ, ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮ
ಬಂಟ್ವಾಳ,ನ.30: ಶೈಖುನಾ ಮರ್ಹೂಂ ಸಜಿಪ ಉಸ್ತಾದ್ ರವರ ಹೆಸರಿನಲ್ಲಿ ಪ್ರತಿವರ್ಷವೂ ಆಚರಿಸಿಕೊಂಡು ಬರುತ್ತಿರುವ ಆಂಡ್ ನೇರ್ಚೆಯು ಡಿ.2 ರಂದು ರವಿವಾರ ಬೆಳಗ್ಗೆ 11 ಗಂಟೆಗೆ ಸಜೀಪನಡು ಕೇಂದ್ರ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಡಿ.1 ರಂದು ಇಶಾ ನಮಾಜ್ ಬಳಿಕ ಖತೀಬ್ ಅಶ್ಫಾಖ್ ಫೈಝಿಯವರ ನೇತೃತ್ವದಲ್ಲಿ ಜಲಾಲಿಯಾ ರಾತೀಬ್ ನಡೆಯಲಿದೆ. ಡಿ.2 ರಂದು ಎರಡು ಜೋಡಿ ಬಡ ಹೆಣ್ಣು ಮಕ್ಕಳ ವಿವಾಹವು ನಡೆಯಲಿದ್ದು, ಬಳಿಕ ಸಜೀಪ ಉಸ್ತಾದ್ ಸ್ಮರಣಾರ್ಥ ಪ್ರವಚನ ಹಾಗೂ ಮೌಲಿದ್ ಮಜ್ಲಿಸ್ ಜರುಗಲಿದೆ ಎಂದು ಪ್ರಕಟನೆ ತಿಳಿಸಿದೆ.