ಡಿ.1: ಬಾನುಲಿ ಸ್ವರಮಂಟಮೆಯಲ್ಲಿ ‘ಪಾಡ್ದನ ಕೋಗಿಲೆ ಗಿಡಿಗೆರೆ ರಾಮಕ್ಕ’ ಸಾಕ್ಷ್ಯರೂಪಕ
ಮಂಗಳೂರು, ನ.30: ಮಂಗಳೂರು ಆಕಾಶವಾಣಿಯ ತುಳು ವಿಭಾಗದ ಸ್ವರಮಂಟಮೆ ಪುಸ್ತಕ-ಧ್ವನಿ ಸುರುಳಿ ಬಿಡುಗಡೆಯ ನೇರಪ್ರಸಾರದ 22ನೇ ಕಾರ್ಯಕ್ರಮದಲ್ಲಿ ಡಿ.1ರಂದು ಬೆಳಗ್ಗೆ 10 ಗಂಟೆಗೆ ‘ಪಾಡ್ದನ ಕೋಗಿಲೆ ಗಿಡಿಗೆರೆ ರಾಮಕ್ಕ’ ಸಾಕ್ಷ್ಯರೂಪಕ ಧ್ವನಿ ಸುರುಳಿ ಅನಾವರಣಗೊಳ್ಳಲಿದೆ.
ಧ್ವನಿ ಸುರುಳಿಯನ್ನು ಜಾನಪದ ಸಂಶೋಧಕ ಡಾ.ಎ.ವಿ.ನಾವಡ ಅನಾವರಣಗೊಳಿಸುವರು. ಸಾಕ್ಷ್ಯರೂಪಕ ಬಗ್ಗೆ ಪತ್ರಕರ್ತ ವಿ.ಕೆ.ಕಡಬ ಮಾತನಾಡಲಿದ್ದಾರೆ. ಅತಿಥಿಗಳಾಗಿ ಪತ್ರಕರ್ತ ಈಶ್ವರ ದೈತೋಟ, ತುಳು ಅಕಾಡಮಿಯ ರಿಜಿಸ್ತ್ರಾರ್ ಚಂದ್ರಹಾಸ್ ರೈ, ಪಿಲಿಕುಳ ನಿಸರ್ಗಧಾಮದ ಡಾ.ನಿತಿನ್ ಬಾಳೆಪುಣಿ, ‘ಪೆಪ್ಪೆರೆರೆ ಪೆರೆರೆರೆ’ ತುಳು ಸಿನೆಮಾ ನಿರ್ದೇಶಕ ಶೋಭರಾಜ್ ಪಾವೂರು, ತುಳು ಲೇಖಕ ಶಾಂತಪ್ಪಬಾಬು ಭಾಗವಹಿಸಲಿದ್ದಾರೆ.
ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಆಸಕ್ತ ಕೇಳುಗರು ಅತಿಥಿಗಳ ಜೊತೆ ಹಾಗೂ ಸಾಕ್ಷ್ಯರೂಪಕ ಕುರಿತು ಅಭಿಪ್ರಾಯ ವ್ಯಕ್ತಪಡಿಸಲು ಆಕಾಶವಾಣಿಯ 0824-2211999/82 7703 8000ನ್ನು ಸಂಪರ್ಕಿಸಬಹುದು ಎಂದು ನಿಲಯದ ಕಾರ್ಯಕ್ರಮ ಮುಖ್ಯಸ್ಥೆ ಉಪಾಲತಾ ಸರಪಾಡಿ ತಿಳಿಸಿದ್ದಾರೆ.