×
Ad

ವಿನುತ ವಿ. ಸಾಲ್ಯಾನ್ ರಿಗೆ ಪಿಎಚ್‍ಡಿ ಪದವಿ

Update: 2018-11-30 17:58 IST

ಕೊಣಾಜೆ, ನ. 30: ಮಂಗಳೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ವಿನುತ ವಿ. ಸಾಲ್ಯಾನ್ ಅವರು ಮಂಡಿಸಿದ ಸಿಂಥೆಸಿಸ್ ಆಂಡ್ ಸ್ಟ್ರಕ್ಚರಲ್ ಸ್ಟಡೀಸ್ ಆಫ್ ಹೆಟರೋಸೈಕ್ಲಸ್ ಡಿರೈವ್‍ಡ್ ಫ್ರಮ್  ಚಾಲ್ಕೊನ್ಸ್ ಎಂಬ ವಿಷಯದಲ್ಲಿ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ರಸಾಯನಶಾಸ್ತ್ರ ವಿಭಾಗದ ಪ್ರೊ.ಬಿ.ನಾರಾಯಣ ಅವರು ಮಾರ್ಗದರ್ಶನ ನೀಡಿದ್ದರು. ಇವರು ಇರ್ವತ್ತೂರು ಗ್ರಾಮದ ದಿ.ವಿಠಲ ಸಾಲ್ಯಾನ್ ಮತ್ತು ಪುಷ್ಪಕಾಂತಿ ಅವರ ಪುತ್ರಿಯಾಗಿದ್ದು, ಕದ್ರಿ ದೇವಿಗಿರಿ ಜಯರಾಜ್ ಅವರ ಪತ್ನಿಯಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News