ಮಹಿಳಾ ತಂತ್ರಜ್ಞಾನಿಗಳ ‘ಫೋರ್ಬ್ಸ್’ ಪಟ್ಟಿಯಲ್ಲಿ ನಾಲ್ವರು ಭಾರತ ಮೂಲದವರು

Update: 2018-11-30 14:47 GMT

ನ್ಯೂಯಾರ್ಕ್, ನ. 30: ಅಮೆರಿಕದ ತಂತ್ರಜ್ಞಾನ ಆಧರಿತ 50 ಅಗ್ರ ಮಹಿಳಾ ಉದ್ಯಮಿಗಳ ಫೋರ್ಬ್ಸ್ ಪಟ್ಟಿಯಲ್ಲಿ ನಾಲ್ವರು ಭಾರತ ಮೂಲದ ಮಹಿಳೆಯರು ಸ್ಥಾನ ಪಡೆದಿದ್ದಾರೆ.

 ಸಿಸ್ಕೊದ ಮಾಜಿ ಮುಖ್ಯ ತಾಂತ್ರಿಕ ಅಧಿಕಾರಿ (ಸಿಟಿಒ) ಪದ್ಮಶ್ರೀ ವಾರಿಯರ್, ಆ್ಯಪ್ ಆಧರಿತ ಕ್ಯಾಬ್ ಸೇವೆಗಳ ಸಂಸ್ಥೆ ಉಬರ್‌ನ ಹಿರಿಯ ನಿರ್ದೇಶಕಿ ಕೋಮಲ್ ಮಂಗ್ಟಾನಿ, ಸ್ಟ್ರೀಮಿಂಗ್ ಕಂಪೆನಿ ಕನ್‌ಫ್ಲುಯೆಂಟ್‌ನ ಮುಖ್ಯ ತಾಂತ್ರಿಕ ಅಧಿಕಾರಿ ಹಾಗೂ ಸಹ ಸಂಸ್ಥಾಪಕಿ ನೇಹಾ ನರ್ಖೇಡೆ ಮತ್ತು ಗುರುತು ನಿರ್ವಹಣೆ ಕಂಪೆನಿ ಡ್ರಾಬ್ರಿಜ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ಥಾಪಕಿ ಕಾಮಾಕ್ಷಿ ಶಿವರಾಮಕೃಷ್ಣನ್- ಪಟ್ಟಿಯಲ್ಲಿರುವ ನಾಲ್ವರು ಭಾರತೀಯ ಮಹಿಳೆಯರು.

ತಂತ್ರಜ್ಞಾನ ದೈತ್ಯ ಐಬಿಎಂನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿನ್ನಿ ರೊಮೆಟಿ ಮೊದಲನೆ ಸ್ಥಾನದಲ್ಲಿದ್ದರೆ, ನೆಟ್‌ಫ್ಲಿಕ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆ್ಯನ್ ಆ್ಯರನ್ ಎರಡನೇ ಸ್ಥಾನದಲ್ಲಿದ್ದಾರೆ.

‘‘ಮಹಿಳೆಯರು ಭವಿಷ್ಯಕ್ಕಾಗಿ ಕಾಯುವುದಿಲ್ಲ. ತಂತ್ರಜ್ಞಾನ ಕ್ಷೇತ್ರದ 50 ಅಗ್ರ ಮಹಿಳಾ ಉದ್ಯಮಿಗಳ ಚೊಚ್ಚಲ ಪಟ್ಟಿಯಲ್ಲಿ ಭವಿಷ್ಯದ ಬಗ್ಗೆ ಚಿಂತಿಸುವ ತಂತ್ರಜ್ಞಾನಿಗಳ ಮೂರು ತಲೆಮಾರುಗಳ ವಿವರಗಳನ್ನು ನೀಡಲಾಗಿದೆ’’ ಎಂದು ‘ಅಮೆರಿಕಾಸ್ ಟಾಪ್ 50 ವಿಮೆನ್ ಇನ್ ಟೆಕ್ 2018’ ಪಟ್ಟಿಯಲ್ಲಿ ‘ಫೋರ್ಬ್ಸ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News