ಅಮೆರಿಕನ್ನರ ವಿರುದ್ಧ ತಾರತಮ್ಯ ಆರೋಪದಿಂದ ಟಿಸಿಎಸ್ ಮುಕ್ತ

Update: 2018-11-30 14:50 GMT

ವಾಶಿಂಗ್ಟನ್, ನ. 30: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಅಮೆರಿಕದ ವಿವಿಧ ರಾಜ್ಯಗಳಲ್ಲಿ ಹೊಂದಿರುವ ತನ್ನ ಕಂಪೆನಿಗಳಿಗೆ ಉದ್ಯೋಗಿಗಳ ನೇಮಕ ಮಾಡುವಾಗ ಅಮೆರಿಕದ ವಿರುದ್ಧ ತಾರತಮ್ಯ ಮಾಡುತ್ತದೆ ಎಂಬ ಆರೋಪಗಳಿಂದ ಕ್ಯಾಲಿಫೋರ್ನಿಯದ ನ್ಯಾಯ ಮಂಡಳಿಯೊಂದು ಗುರುವಾರ ಕಂಪೆನಿಯನ್ನು ಮುಕ್ತಗೊಳಿಸಿದೆ.

ಫೆಡರಲ್ ನ್ಯಾಯಾಲಯವೊಂದರ ನ್ಯಾಯಮಂಡಳಿಯು ತನ್ನೆದುರು ಇದ್ದ ಎರಡು ಪ್ರಶ್ನೆಗಳಿಗೆ ‘ಇಲ್ಲ’ ಎಂಬ ತೀರ್ಪುಗಳನ್ನು ನೀಡಿತು.

ಮೊದಲನೆಯ ಪ್ರಶ್ನೆ ಹೀಗಿತ್ತು: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಜನಾಂಗೀಯ ಆಧಾರದಲ್ಲಿ ಏಶ್ಯಕ್ಕೆ ಹೊರತಾದ ಉದ್ಯೋಗಿಗಳನ್ನು ವಜಾಗೊಳಿಸಿದೆಯೇ?

ಎರಡನೇ ಪ್ರಶ್ನೆ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಜನಾಂಗೀಯ ಆಧಾರದಲ್ಲಿ ಭಾರತಕ್ಕೆ ಹೊರತಾದ ಉದ್ಯೋಗಿಗಳನ್ನು ವಜಾಗೊಳಿಸಿದೆಯೇ?

‘‘ಈ ಪ್ರಕರಣದಲ್ಲಿ ಮಾಡಲಾಗಿರುವ ಆರೋಪಗಳು ಆಧಾರರಹಿತ ಎಂಬುದಾಗಿ ನಾವು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ನಮ್ಮ ನಿಲುವಿಗೆ ನ್ಯಾಯಮಂಡಳಿ ಮನ್ನಣೆ ನೀಡಿರುವುದರಿಂದ ನಮಗೆ ತೃಪ್ತಿಯಾಗಿದೆ’’ ಎಂದು ಟಿಸಿಎಸ್ ವಕ್ತಾರರೊಬ್ಬರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News