ಜ. 4ರಿಂದ 'ಆಳ್ವಾಸ್ ವಿರಾಸತ್ 2019'
Update: 2018-11-30 20:35 IST
ಮೂಡುಬಿದಿರೆ, ನ.30: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ವೈಭವದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ 'ಆಳ್ವಾಸ್ ವಿರಾಸತ್' ಜನವರಿ 4ರಂದು ಪ್ರಾರಂಭವಾಗಿ ಜ. 6ರಂದು ಮುಕ್ತಾಯಗೊಳ್ಳಲಿದೆ.
ಎಂದಿನಂತೆ ದಿನವೊಂದಕ್ಕೆ ಎರಡು ಅವಧಿಗಳಿದ್ದು, ಪೂರ್ವಾರ್ಧದಲ್ಲಿ ಸಂಗೀತ, ಉತ್ತಾರಾರ್ಧದಲ್ಲಿ ನೃತ್ಯವೂ ಸಾಂಸ್ಕೃತಿಕ ಪ್ರಿಯರ ಮನಸ್ಸನ್ನು ಸೂರೆಗೊಳ್ಳಲಿದೆ.
ಪುತ್ತಿಗೆ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ ವಿರಾಸತ್ ನಡೆಯಲಿದೆ. ಬೃಹತ್ ವೇದಿಕೆಯಿದಾಗಿದ್ದು, 50 ಸಾವಿರಕ್ಕಿಂತ ಹೆಚ್ಚಿನ ಪ್ರೇಕ್ಷಕರಿಗೆ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ತಿಳಿಸಿದ್ದಾರೆ.