ಮಹಿಳೆಯ ಸಂಶಯಾಸ್ಪದ ಸಾವು: ದೂರು

Update: 2018-11-30 16:17 GMT

ಕಾರ್ಕಳ, ನ.30: ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ದುರ್ಗಾ ಗ್ರಾಮದ ಪಲಾಯಿಬಾಕ್ಯಾರು ಎಂಬಲ್ಲಿ ನ.30ರಂದು ಮಧ್ಯಾಹ್ನ  ನಡೆದಿದೆ.

ಮೃತರನ್ನು ಪಲಾಯಿಬಾಕ್ಯಾರು ನಿವಾಸಿ ಫ್ರಾನ್ಸಿಸ್ ಕಾರ್ಡೊಜಾ ಎಂಬವರ ಪತ್ನಿ ಸವಿತಾ ಲೋಬೊ (27) ಎಂದು ಗುರುತಿಸಲಾಗಿದೆ. ಬಂಟ್ವಾಳ ತಾಲೂಕಿನ ಬಿಳಯೂರು ನಿವಾಸಿ ಹೆಲೆನ್ ಲೋಬೊ ಎಂಬವರ ಮಗಳು ಸವಿತಾ ಲೋಬೊ ಅವರನ್ನು 2017ರ ಡಿ.28ರಂದು ಫ್ರಾನ್ಸಿಸ್ ಕಾರ್ಡೊಜಾರಿಗೆ ಮದುವೆ ಮಾಡಿಕೊಟ್ಟಿದ್ದರು.

ಫ್ರಾನ್ಸಿಸ್ ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದು, ಸವಿತಾ ಆಕೆಯ ಅತ್ತೆ ಯೊಂದಿಗೆ ವಾಸವಾಗಿದ್ದಳು. ಈ ಮಧ್ಯೆ ಸವಿತಾ ಇಂದು ಮನೆಯ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಈಕೆಯ ಮರಣದಲ್ಲಿ ಸಂಶಯ ಇದೆ ಎಂದು ಮೃತಳ ತಾಯಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News