ಡಿ.2: ನಂದರಬೆಟ್ಟುವಿನಲ್ಲಿ ಮಿಲಾದ್ ಫೆಸ್ಟ್, ದಫ್ ಸ್ಪರ್ಧೆ
Update: 2018-11-30 22:48 IST
ಬಿ.ಸಿ.ರೋಡು, ನ. 30: ನಂದಬೆಟ್ಟು ಇರ್ಶಾದುಲ್ ಮಸಾಕೀನ್ ಎಸೋಸಿಯೇಶನ್ ಹಾಗೂ ಎನ್.ಎಸ್.ಸಿ.ಸಿ. ಇದರ 4ನೇ ವರ್ಷದ ಮಿಲಾದ್ ಸಂಭ್ರಮದ ಪ್ರಯುಕ್ತ ಮಿಲಾದ್ ಫೆಸ್ಟ್-2018, ದಫ್ ಸ್ಪರ್ಧೆ, ಮೌಲಿದ್ ಪಾರಾಯಣ ಹಾಗೂ ಪ್ರತಿಭಾ ಕಾರ್ಯಕ್ರಮಗಳು ಡಿ. 2 ರಂದು ಸಂಜೆ 6.30ಕ್ಕೆ ಇಲ್ಲಿನ ಮರ್‍ಹೂಂ ಮುಹಮ್ಮದ್ ಉವೈಸ್ ವೇದಿಕೆಯಲ್ಲಿ ನಡೆಯಲಿದೆ.
ಮಿತ್ತಬೈಲು ಖತೀಬ್ ಹಾಜಿ ಎಂ.ವೈ. ಅಶ್ರಫ್ ಫೈಝಿ ಕೊಡಗು ದುವಾಶಿರ್ವಚನಗೈಯಲಿದ್ದು, ಪರ್ಲಿಯಾ ಅರಫಾ ಜುಮಾ ಮಸೀದಿ ಖತೀಬ್ ಅಬ್ದುಲ್ ಖಾದರ್ ಅಶ್ಶಾಫೀ ಉದ್ಘಾಟಿಸುವರು. ಇರ್ಶಾದುಲ್ ಮಸಾಕೀನ್ ಅಧ್ಯಕ್ಷ ಎಸ್.ಎಂ. ಸಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ದಫ್ ಸ್ಪರ್ಧಾ ವಿಜೇತ ತಂಡಗಳಿಗೆ ಪ್ರಥಮ ರೂ.8,000 ದ್ವಿತೀಯ ರೂ. 5,000 , ತೃತೀಯ 3,000 ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.