×
Ad

‘ಮೇಲ್ತೆನೆ’ಯ ಮೀಲಾದ್ ಬ್ಯಾರಿ ಕವನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

Update: 2018-11-30 23:25 IST

ಮಂಗಳೂರು, ನ.30: ದೇರಳಕಟ್ಟೆಯ ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗವಾದ ‘ಮೇಲ್ತೆನೆ’ ಸಂಘಟನೆಯು ಪ್ರವಾದಿ ಮುಹಮ್ಮದ್(ಸ)ರ ಜನ್ಮದಿನಚಾರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ 'ಆನ್‌ಲೈನ್ ಬ್ಯಾರಿ ಕವನ' ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ಶುಕ್ರವಾರ ದೇರಳಕಟ್ಟೆಯ ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

‘ಮೇಲ್ತೆನೆ’ಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆಯ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ‘ಮೇಲ್ತೆನೆ’ಯ ಅಧ್ಯಕ್ಷ ಬಶೀರ್ ಅಹ್ಮದ್ ಕಿನ್ಯ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ‘ವಾರ್ತಾಭಾರತಿ’ಯ ಸುದ್ದಿ ಸಂಪಾದಕ ಬಿ.ಎಂ. ಬಶೀರ್, ಸಮಾಜಕ್ಕೆ ಆದರ್ಶರಾಗಿದ್ದ ಪ್ರವಾದಿ ಮುಹಮ್ಮದ್ ಅವರ ಬದುಕಿನ ಮಹತ್ವವನ್ನು ಯುವ ಜನತೆಗೆ ತಿಳಿಯಲು ಇಂತಹ ಕಾರ್ಯಕ್ರಮಗಳು ಪೂರಕವಾಗಿದೆ ಎಂದರು.

ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫಾರಂನ ಸಲಹೆಗಾರ ಮುಹಮ್ಮದ್ ಕಲ್ಲಾಪು ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.

ಈ ಸಂದರ್ಭ ಸ್ಪರ್ಧಾ ವಿಜೇತರ ಕವಿಗೋಷ್ಠಿಯೂ ನಡೆಯಿತು. ಸ್ಪರ್ಧೆಯಲ್ಲಿ ವಿಜೇತರಾದ ಮುಹಮ್ಮದ್ ಅನ್ವರ್ ಬಿನ್ ಅಬ್ಬಾಸ್ (ಪ್ರಥಮ), ಮಿಸ್ರಿಯಾ ಐ.ಪಜೀರ್ (ದ್ವಿತೀಯ), ನಿಝಾಮ್ ಗೋಳಿಪಡ್ಪು (ತೃತೀಯ) ಹಾಗೂ ಸಮಾಧಾನಕರ ಬಹುಮಾನಕ್ಕೆ ಆಯ್ಕೆಯಾದ ಸಮ್ಮಿ ಪಾನೇಲ, ರಫೀಕ್ ಕಲ್ಕಟ್ಟ, ಅನ್ಸಾರ್ ಕಾಟಿಪಳ್ಳ, ಇಬ್ರಾಹೀಂ ಬಾತಿಷ್ ಗೋಳ್ತಮಜಲು, ಎ.ಕೆ. ನಂದಾವರ, ಕಬೀರ್ ಹಾಸನ, ನಿಝಾಮುದ್ದೀನ್ ಉಪ್ಪಿನಂಗಡಿ ಬಹುಮಾನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಮೇಲ್ತೆನೆಯ ಪದಾಧಿಕಾರಿಗಳಾದ ಟಿ.ಇಸ್ಮಾಯೀಲ್, ಹಂಝ ಮಲಾರ್, ಮನ್ಸೂರ್ ಅಹ್ಮದ್ ಸಾಮಣಿಗೆ, ಮುಹಮ್ಮದ್ ಭಾಷಾ ನಾಟೆಕಲ್ ಪಾಲ್ಗೊಂಡಿದ್ದರು.

ಮೇಲ್ತೆನೆಯ ಕೋಶಾಧಿಕಾರಿ ರಫೀಕ್ ಪಾನೇಲ ಸ್ವಾಗತಿಸಿದರು. ಸದಸ್ಯರಾದ ನಿಝಾಮ್ ಬಜಾಲ್ ವಂದಿಸಿದರು. ಇಸ್ಮತ್ ಪಜೀರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News