×
Ad

ಮಾನವ ಕುಲದ ಮೇಲೆ ದುಷ್ಪರಿಣಾಮ ಬೀರುವಂತಹ ಯಾವುದೇ ಪ್ರಗತಿ ನಮಗೆ ಬೇಡ: ಫಾ. ವಿಕ್ಟರ್ ವಿಜಯ್ ಲೋಬೊ

Update: 2018-12-01 22:43 IST

ಮಂಗಳೂರು, ಡಿ.1: ಕಾರ್ಖಾನೆಗಳ ಹೆಚ್ಚಳದಿಂದ ಮನುಷ್ಯನ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮಾನವ ಕುಲದ ಮೇಲೆ ದುಷ್ಪರಿಣಾಮ ಬೀರುವಂತಹ ಯಾವುದೇ ಪ್ರಗತಿ ನಮಗೆ ಬೇಡವೇ ಬೇಡ ಎಂದು ಮಂಗಳೂರು ಧರ್ಮ ಪ್ರಾಂತದ ಪಿಆರ್‌ಒ ಫಾದರ್ ವಿಕ್ಟರ್ ವಿಜಯ್ ಲೋಬೊ  ತಿಳಿಸಿದರು.

ಸುನ್ನಿ ಸಂದೇಶದ 17ನೇ ವಾರ್ಷಿಕೋತ್ಸವ ಪ್ರಯುಕ್ತ ‘ಗಿಡ ಮರ ಬೆಳೆಸಿ, ಮಾದಕ ವ್ಯಸನ ತ್ಯಜಿಸಿ’ ಆಂದೋಲನ ಅಂಗವಾಗಿ ನಗರದ ನೆಹರೂ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ‘ಸೌಹಾರ್ದ ಸಂಗಮ ಹಾಗೂ ಹುಬ್ಬರ್ರಸೂಲ್ ಪ್ರಭಾಷಣ’ ಸಮಾರಂಭವನ್ನು ಸಮಸ್ತ ಮುಶಾವರದ ಖಾಸಿಮ್ ದಾರಿಮಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ ಮಾತನಾಡಿ, ‘ಗಿಡ ಮರ ಬೆಳೆಸಿ, ಮಾದಕ ವ್ಯಸನ ತ್ಯಜಿಸಿ’ ಮಾದರಿಯಾಗಿದ್ದು, ಪೊಲೀಸ್ ಇಲಾಖೆಯು ಕೂಡ ಡಿಸೆಂಬರ್ ತಿಂಗಳಲ್ಲಿ ಅಪರಾಧ ತಡೆ ಮಾಸಾಚರಣೆಯಾಗಿ ಆಚರಿಸುತ್ತಿದೆ. ಸುನ್ನಿ ಸಂದೇಶ ಹಮ್ಮಿಕೊಂಡಿರುವ ಹಸಿರಿನ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಸಮಾರಂಭಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹುಬ್ಬರ್ರಸೂಲ್ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ನನ್ನ ಹೆಮ್ಮೆಯ ಭಾರತ ದೇಶದ ಮೇಲೆ ಸಮೀಪದ ಸೌದಿ ಅರೆಬಿಯಾ ಯುದ್ಧಕ್ಕೆ ಬಂದರೆ ನಾನು ಭಾರತದ ಪರವಾಗಿ ಎದೆಯೊಡ್ಡಿ ನಿಲ್ಲಲಿದ್ದೇನೆ. ಎಲ್ಲ ಧರ್ಮಗಳ ಸಹೋದರರು ಒಗ್ಗಟ್ಟಿನಿಂದ ಕಾರ್ಯ ಸಾಧನೆ ಮಾಡಿದರೆ ಭಾರತ ಸೂಪರ್ ಪವರ್ ರಾಷ್ಟ್ರವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಸುನ್ನಿ ಸಂದೇಶ ಪ್ರಧಾನ ಸಂಪಾದಕ ಹಾಜಿ ಕೆ.ಎಸ್.ಹೈದರ್ ದಾರಿಮಿ, ಮಾಜಿ ಸಚಿವ ರಮಾನಾಥ ರೈ, ಹುಬ್ಬರ್ರಸೂಲ್ ಕಾರ್ಯಕ್ರಮದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಮನ್ಸೂರ್ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾರಂಭಕ್ಕೆ ಶುಭ ಹಾರೈಸಿದರು.

ಸಭಾ ಕಾರ್ಯಕ್ರಮದ ಬಳಿಕ ಅಂತರರಾಷ್ಟ್ರೀಯ ಪ್ರಭಾಷಣಕಾರ ಉಸ್ತಾದ್ ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಹುಬ್ಬುರ್ರಸೂಲ್ ಕುರಿತು ಭಾಷಣ ಮಾಡಿದರು.

ಸಮಾರಂಭದಲ್ಲಿ ರಾಜೀವ್‌ಗಾಂಧಿ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ಯು.ಟಿ.ಇಫ್ತಿಕಾರ್, ದ.ಕ. ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮಸೂದ್, ಉಳ್ಳಾಲ ದರ್ಗಾದ ರಶೀದ್ ಹಾಜಿ ಉಳ್ಳಾಲ್, ಹುಬ್ಬರ್ರಸೂಲ್ ಕಾರ್ಯಕ್ರಮದ ಸ್ವಾಗತ ಸಮಿತಿಯ ಉಪಾಧ್ಯಕ್ಷ ಮುಸ್ತಫಾ ಭಾರತ್, ಕತಾರ್ ಉದ್ಯಮಿ ಮೋನು, ಅಬ್ದುಲ್ ಖಾದರ್ ದಾರಿಮಿ ಬಂಬ್ರಾಣ, ತಬೂಬ್ ದಾರಿಮಿ, ಮುಹಮ್ಮದ್ ಬ್ಯಾರಿ ಎಡಪದವು, ಹಕೀಮ್ ಪರ್ತಿಪಾಡಿ, ಯೂಸುಫ್ ಹಾಜಿ ಅಡ್ಡೂರು, ಎಂ.ಎಚ್. ಹಾಜಿ ಅಡ್ಡೂರು, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಅಬ್ದುಲ್ ರಹ್ಮಾನ್ ಹಾಜಿ ನಸೀಮಾ, ಉಮರ್ ದಾರಿಮಿ ಪಟ್ಟೋರಿ, ಮಾಹಿಲ್ ದಾರಿಮಿ, ಸಿದ್ದೀಕ್ ಪೈಝಿ ಕರಾಯ, ಝೈನ್ ಸಖಾಫಿ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎನ್.ಎಸ್.ಕರೀಂ, ಇಬ್ರಾಹೀಂ ಬಾಕವಿ ಕೆ.ಸಿ.ರೋಡ್, ಉಸ್ಮಾನ್ ಫೈಝಿ ತೋಡಾರ್, ಉಸ್ಮಾನ್ ತೋಡಾರ್, ಫಾರೂಕ್ ಉಳ್ಳಾಲ್, ನಝೀರ್ ಉಳ್ಳಾಲ್, ಶರೀಫ್ ಉಸ್ತಾದ್ ಉಳ್ಳಾಲ್, ಸುಲೈಮಾನ್ ಶೇಕ್, ಹಾರುನ್ ಅಹ್ಸನಿ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅತಾವುಲ್ಲಾ ಜೋಕಟ್ಟೆ, ಪ್ರಕಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಅಬೂಬಕರ್ ಮುಸ್ಲಿಯಾರ್ ಪ್ರಾರ್ಥಿಸಿದರು. ಸ್ವಾಗತ ಸಮಿತಿಯ ಕನ್ವೀನರ್ ನೌಶಾದ್ ಹಾಜಿ ಸೂರಲ್ಪಾಡಿ ಸ್ವಾಗತಿಸಿದರು. ನೌಫಲ್ ಕುಡ್ತಮುಗೇರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News