×
Ad

ಮೋಂಟುಗೋಳಿ: ಉಡುಪಿ ಸಂಯುಕ್ತ ಖಾಝಿ ಬೇಕಲ್ ಉಸ್ತಾದ್‌ ರಿಗೆ ಸನ್ಮಾನ

Update: 2018-12-01 23:07 IST

ಮಂಗಳೂರು, ಡಿ.1: ಗೌಸಿಯಾ ಜುಮಾ ಮಸೀದಿ ಮೋಂಟುಗೋಳಿ ಕೈರಂಗಳ ಇದರ ಜಮಾಅತ್‌ ವತಿಯಿಂದ ತಾಜುಲ್ ಪುಕಹಾಅ ಗೌರವವನ್ನು ಪಡೆದ ಉಡುಪಿ ಸಂಯುಕ್ತ ಖಾಝಿ  ಅಲ್ ಹಾಜ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಉಸ್ತಾದ್‌ರನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಕೌನ್ಸಿಲ್ ಅಧ್ಯಕ್ಷ  ಹೈದರ್ ಪರ್ತಿಪ್ಪಾಡಿ ಸನ್ಮಾನಿಸಿದರು.

ಈ ಸಂದರ್ಭ  ಗೌಸಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಸುಲೈಮಾನ್, ರಫೀಕ್ ಸಅದಿ, ಸದರ್ ಮುಅಲ್ಲಿಮ್ ಅಬ್ದುಲ್ ಲತೀಫ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News