ಪಾದುವ ಪದವಿಪೂರ್ವ ಕಾಲೇಜು: ಎನ್ನೆಸ್ಸೆಸ್ ವಾರ್ಷಿಕ ಶಿಬಿರ
ಮಂಗಳರು,ಡಿ.1: ಪಾದುವ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ 7 ದಿನಗಳ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಸಂತ ಥೋಮಸರ ಹಿರಿಯ ಪ್ರಾಥಮಿಕ ಶಾಲೆ, ಕಾವಳಪಡೂರು, ವಗ್ಗದಲ್ಲಿ ಇತ್ತೀಚೆಗೆ ಜರುಗಿತು.
ಸಂತ ಥೋಮಸರ ಚರ್ಚ್ ಧರ್ಮಗುರುಗಳಾದ ರೇ.ಫಾ.ಆಲ್ಬನ್ ಡಿಸೋಜ ಉದ್ಘಾಟನೆ ನೆರವೇರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಗ್ಲಾಡಿಸ್ ಅಲೋಶಿಯಸ್ ಅಧ್ಯಕ್ಷತೆ ವಹಿಸಿದ್ದರು. ಸಂತ ಥೋಮಸರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿ. ವಿನಿತಾ ಐರಿನ್ ಪಿರೇರಾ ಗೌರವ ಉಪಸ್ಥಿತಿ ವಹಿಸಿದ್ದರು ಹಾಗೂ ಮುಖ್ಯ ಅತಿಥಿಯಾಗಿ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯ ಪಿಎಸ್ಐ ಶ್ರೀ ಪ್ರಸನ್ನ ಎಂ.ಎಸ್. ಉಪಸ್ಥಿತರಿದ್ದರು.
ಶಿಬಿರದಲ್ಲಿ ಪ್ರತೀ ದಿನ ದೈಹಿಕ ಶಿಕ್ಷಕರಾದ ಶ್ರೀ ಜಗದೀಶ್ ಮತ್ತು ಶ್ರೀ ಹರಿಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಯೋಗ, ವ್ಯಾಯಾಮ ಮತ್ತು ದ್ಯಾನದೊಂದಿಗೆ ದಿನದ ಚಟುವಟಿಕೆಗೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳು ಏಳು ದಿನಗಳಲ್ಲಿ ಶಾಲಾ ವಠಾರದಲ್ಲಿ ಗಿಡ ಕಳೆಗಳನ್ನು ಕೀಳುವುದು, ಆಟದ ಮೈದಾನ ಸಮತಟ್ಟುಗೊಳಿಸುವಿಕೆ. ರಸ್ತೆಯ ಬದಿಯ ಚರಂಡಿ ರಿಪೇರಿ, ಪ್ಲಾಸ್ಟಿಕ್ ಹೆಕ್ಕುವುದು ಮುಂತಾದ ಶ್ರಮದಾನ ಕಾರ್ಯಗಳನ್ನು ಮಾಡಿದರು.
ಸಮಾರೋಪದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಗ್ಲಾಡಿಸ್ ಅಲೋಶಿಯಸ್ ಅಧ್ಯಕ್ಷತೆ ವಹಿಸಿದರು. ಸಮಾರೋಪ ಭಾಷಣಗವನ್ನು ಪಾದುವ ಪದವಿ ಕಾಲೇಜಿನ ಪ್ರಾಂಶುಪಾಲರಾದ ರೇ.ಫಾ. ಆಲ್ವಿನ್ ಸೆರಾವೊ ನೆರವೇರಿಸಿದರು. ಸಂತ ಥೋಮಸರ ಚರ್ಚ್‌ನ ಧರ್ಮಗುರುಗಾದ ರೇ. ಫಾ. ಆಲ್ಬನ್ ಡಿಸೋಜ, ಸಂತ ಥೋಮಸರ ಚರ್ಚ್‌ನ ಆಡಳಿತ ಮಂಡಳಿಯ ಉಪಧ್ಯಕ್ಷರಾದ ಶ್ರೀ ಆಲ್ಪೊನ್ಸ್ ಫೆರ್ನಾಂಡಿಸ್ ಹಾಗೂ ಕಥೊಲಿಕ್ ಸಭಾ ಅಧ್ಯಕ್ಷರಾದ ಸ್ಟಾನಿ ಲಸ್ರಾದೊ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಮತ್ತು ಶಿಬಿರದ ಬಗ್ಗೆ ಶ್ಲಾಘಿಸಿದರು.
ಎನ್ನೆಸ್ಸೆಸ್ ಘಟಕದ ಕಾರ್ಯಕ್ರಮಾಧಿಕಾರಿ ಶ್ರೀ ಯತಿರಾರ್ ಸ್ವಾಗತಿಸಿ, ಸಹಯೋಜನಾಧಿಕಾರಿಯಾದ ಶ್ರೀ ಅನಿಲ್ ಡಿಮೆಲ್ಲೊ ವಂದಿಸಿದರು. ಕುಮಾರಿ ಡ್ಯಾಪ್ನಿ ಕಾರ್ಯಕ್ರಮ ನಿರ್ವಹಸಿದರು.