×
Ad

ಬೊಳ್ಳಾಯಿ : ಬೃಹತ್ ರಕ್ತದಾನ ಶಿಬಿರ

Update: 2018-12-02 23:44 IST

ಬಂಟ್ವಾಳ: ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್, ಎಸ್ಕೆಎಸ್ಸೆಸ್ಸೆಫ್ ಬೊಳ್ಳಾಯಿ ಶಾಖೆ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ (ಸ) ರವರ ಜನ್ಮದಿನದ ಪ್ರಯುಕ್ತ ಯೇನಪೊಯ ಮೆಡಿಕಲ್ ಕಾಲೇಜಿನ ಸಹಭಾಗಿತ್ವದಲ್ಲಿ ರವಿವಾರ ಬೃಹತ್ ರಕ್ತದಾನ ಶಿಬಿರ ಬೊಳ್ಳಾಯಿ ಎಸ್ಕೆಎಸ್ಸೆಸ್ಸೆಫ್ ಕಛೇರಿಯಲ್ಲಿ ನಡೆಯಿತು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಎಸ್ಕೆಎಸ್ಸೆಸ್ಸೆಫ್ ಬೊಳ್ಳಾಯಿ ಶಾಖೆಯ ಅದ್ಯಕ್ಷರಾದ  ಹಾಜಿ ನಝೀರ್ ಅಹಮದ್ ವಹಿಸಿದ್ದರು, ಕಾರ್ಯಕ್ರಮದ ಉದ್ಘಾಟನೆಯನ್ನು ಅಸೈಯ್ಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ, ಪಿ ಬಿ ಅಬೂಬಕ್ಕರ್ ಹಾಜಿ ಅಧ್ಯಕ್ಷರು ಬದ್ರಿಯಾ ಜಮಾ ಮಸ್ಜಿದ್, ಬಿ ಎಸ್ ಮಹಮ್ಮದ್ ಪ್ರಧಾನ ಕಾರ್ಯದರ್ಶಿ ಬದ್ರಿಯ ಜಮಾ ಮಸ್ಜಿದ್, ಹಾಜಿ ಅಬ್ದುಲ್ ಅಝೀಝ್ ಸದಸ್ಯರು ಸಜಿಪ ಮೂಡ ಗ್ರಾಮ ಪಂಚಾಯಿತಿ, ಪಿ ಬಿ ಅಬ್ದುಲ್ ಕುಂಞಿ ಸದಸ್ಯರು ಸಜಿಪ ಮೂಡ ಗ್ರಾಮ ಪಂಚಾಯಿತಿ, ಎನ್ ಕರೀಂ ಅಧ್ಯಕ್ಷರು ಇಂಟೆಕ್ ಪಾಣೆಮಂಗಳೂರು ಬ್ಲಾಕ್, ಬ್ಲಡ್ ಡೋನರ್ಸ್ ಮಂಗಳೂರಿನ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ, ಪ್ರಧಾನ ಕಾರ್ಯದರ್ಶಿ ನವಾಝ್ ಕಲ್ಲರಕೋಡಿ, ಶಾಹುಲ್ ಹಮೀದ್ ಕಾಶಿಪಟ್ಣ ಮಾಧ್ಯಮ ವಿಭಾಗದ ಮುಖ್ಯಸ್ಥ, ಉಪಾಧ್ಯಕ್ಷರು ಗಳಾದ ಸಲಾಮ್ ಚೆಂಬುಗುಡ್ಡೆ, ಮುನೀರ್ ಚೆಂಬುಗುಡ್ಡೆ, ಎಡ್ಮಿನ್ ಗಳಾದ ಸಿರಾಜ್ ಫಜೀರ್, ಮಸೂದ್ ತೋಡಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಬ್ಲಡ್ ಡೋನರ್ಸ್ ಮಂಗಳೂರು ಮತ್ತು ಯೇನಪೊಯ ಮೆಡಿಕಲ್ ಕಾಲೇಜಿನ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಸುಮಾರು 40ಕ್ಕೂ ಅಧಿಕ ರಕ್ತದಾನಿಗಳು‌ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.  ಕಾರ್ಯಕ್ರಮವನ್ನು ಬಶೀರ್ ಬೊಳ್ಳಾಯಿ ನಿರೂಪಿಸಿದರು, ಆರಿಫ್ ಬೊಳ್ಳಾಯಿ ಧನ್ಯವಾದ ಸಮರ್ಪಿಸಿದರು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News