ಉಡುಪಿ: ಮಧ್ವ ಸರೋವರದಲ್ಲಿ ಮುಳುಗಿ ಯಾತ್ರಾರ್ಥಿ ಮೃತ್ಯು

Update: 2018-12-03 04:26 GMT

ಉಡುಪಿ, ಡಿ.3: ಶ್ರೀ ಕೃಷ್ಣ ಮಠದ ಮಧ್ವ ಸರೋವರದಲ್ಲಿ ಯಾತ್ರಾರ್ಥಿಯೋರ್ವ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಮುಂಜಾವ ನಡೆದಿದೆ.

ಮೃತರನ್ನು ಶಿವಮೊಗ್ಗ ವಿದ್ಯಾನಗರ ನಿವಾಸಿ ಆದರ್ಶ್(39) ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ 5:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ.

ಆದರ್ಶ್ ಅವರು ಮಧ್ವ ಸರೋವರದಲ್ಲಿ ಸ್ನಾನಕ್ಕಿಳಿದವರು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಮುಳುಗು ತಜ್ಞ ಅರುಣ ಕುಮಾರ್ ದೆಂದೂರುಕಟ್ಟೆ ಸರೋವರದ ತಳ ಜಾಲಾಡಿ ಮೃತದೇಹವನ್ನು ಮೇಲೆತ್ತಿದರು.

 ರವಿವಾರ ಇಲ್ಲಿನ ವಸತಿಗೃಹದಲ್ಲಿ ತಂಗಿದ್ದ ಆದರ್ಶ್ ವಸತಿಗೃಹದ ನೋಂದಣಿ ಪುಸ್ತಕದಲ್ಲಿ ವಿದ್ಯಾನಗರ, 4ನೇ ಎ ಕ್ರಾಸ್ ಶಿವಮೊಗ್ಗ ಎಂಬ ವಿಳಾಸ ದಾಖಲಿಸಿದ್ದಾರೆ.

ಮೃತದೇಹವನ್ನು ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News